Connect with us


      
ದೇಶ

ಹಪ್ಪಳ ಕದ್ದುಕೊಂಡು ಓಡಿ ಹೋದ ನಾಯಿ!

Iranna Anchatageri

Published

on

ವೈರಲ್ ವಿಡಿಯೋ : ಜನವರಿ 05 (ಯು.ಎನ್.ಐ.) ಕೆಲವೊಮ್ಮೆ ಸಣ್ಣ ವಿಷಯಗಳು ಸಹ ದೊಡ್ಡ ಸಂತೋಷವನ್ನು ನೀಡುತ್ತವೆ. ಕದಿಯುವುದು ಪಾಪ ಎಂದು ಹೇಳಿ ಕೊಟ್ರೂ ಸಹ ನಾವು ಬಾಲ್ಯದಲ್ಲಿ ಗೆಳೆಯರ ಬಾಕ್ಸ್ ನಿಂದ ತಿಂಡಿ ಕದ್ದಿದ್ದೇವೆ. ಬಾಲ್ಯದ ಘಟನೆಗಳನ್ನು ದೊಡ್ಡವರಾದ್ಮೇಲೆ ನೆನಪು ಮಾಡಿಕೊಂಡು ನಕ್ಕಿದ್ದು ಇದೆ.

ಅಂದಹಾಗೆ, ಒಟ್ಟಾರೆ ಇದನ್ನು ಕಳ್ಳತನ ಅಂತಾ ಕರೆದ್ರೂ ಇದರಲ್ಲಿ ಅಪಾರ ಸಂತೋಷ ಇದೆ. ಇತ್ತೀಚಿನ ದಿನಗಳಲ್ಲಿ ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಇದೇ ಥರ ನಾಯಿಯೊಂದು ಮಾಲೀಕರಿಲ್ಲದ ಮನೆಗೆ ನುಗ್ಗಿ ಹಪ್ಪಳ ಕದ್ದಿರೋ ವಿಡಿಯೋವೊಂದು ವೈರಲ್ ಆಗಿದೆ. ಈ ತಮಾಷೆಯ ವಿಡಿಯೋ 17 ಸೆಕೆಂಡ್ ಗಳಾಗಿದ್ದು, ಐಪಿಎಸ್ ಅದಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಈವರೆಗೆ ವೈರಲ್ ವಿಡಿಯೋವನ್ನು 13 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದು, ನೂರಾರು ಮಂದಿ ಲೈಕ್ ಮಾಡಿದ್ದಾರೆ.

Share