Connect with us


      
ಕ್ರೀಡೆ

ಉದ್ದೀಪನ ಮದ್ದು ಸೇವನೆ; ಸಿಕ್ಕಿಬಿದ್ದ ರಾಷ್ಟ್ರೀಯ ಸ್ಪ್ರಿಂಟ್ ಚಾಂಪಿಯನ್..!

UNI Kannada

Published

on

ನವದೆಹಲಿ, ಜ 2(ಯುಎನ್‌ ಐ) ಅಂಡರ್‌ -23ರ ವಿಭಾಗದಲ್ಲಿ ಭಾರತದ ರಾಷ್ಟ್ರೀಯ ಸ್ಪ್ರಿಂಟ್ ಚಾಂಪಿಯನ್ ತರಂಜಿತ್ ಕೌರ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ತಿಳಿಸಿದೆ.
ದೆಹಲಿಯ 20ರ ಹರೆಯದ ತರಂಜಿತ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಅಂಡರ್-23 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100ಮೀ , 200ಮೀ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. “ನಾಡಾ” ಶಿಸ್ತು ಸಮಿತಿಯ ವಿಚಾರಣೆ ವೇಳೆ ತರಂಜಿತ್ ತಪ್ಪಿತಸ್ಥರೆಂದು ಸಾಬೀತಾದರೆ ನಾಲ್ಕು ವರ್ಷಗಳ ನಿಷೇಧ ವಿಧಿಸುವ ಸಾಧ್ಯತೆಯಿದೆ.

Share