Connect with us


      




ಕರ್ನಾಟಕ

ಸಿಎಂ ಬೊಮ್ಮಾಯಿಯವರನ್ನು ಭೇಟಿ ಮಾಡಿದ ಡಾ. ರಾಜ್ ಕುಟುಂಬ

Lakshmi Vijaya

Published

on

ಬೆಂಗಳೂರು: ಆಗಸ್ಟ್ 17 (ಯು.ಎನ್.ಐ.) ವರನಟ ಡಾ. ರಾಜ್ ಕುಮಾರ್ ಕುಟುಂಬದ ಸದಸ್ಯರು ಬುಧವಾರ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿಯವರನ್ನು ಭೇಟಿ ಮಾಡಿದರು.  ರೇಸ್ ಕೋರ್ಸ್ ನಿವಾಸದಲ್ಲಿ ಸಿಎಂ ಬೊಮ್ಮಾಯಿಯವರನ್ನ ಭೇಟಿಯಾದ ರಾಜ್ ಕುಟುಂಬದ ಸದಸ್ಯರು, ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ ,ಪುನೀತ್ ರಾಜ್ ಕುಮಾರ್ ಸಮಾಧಿ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿ ಸ್ಥಳವನ್ನ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.

ಒಂದೇ ಸ್ಥಳದಲ್ಲಿ ಮೂವರ ಸಮಾಧಿ ಇದ್ದು, ಇದರ ಅಭಿವೃದ್ಧಿ ವಿಚಾರವಾಗಿ ಸಿಎಂ ಜೊತೆ ಚರ್ಚೆಸಿದರು. ರಾಜ್ ಕುಟುಂಬಸ್ಥರು ಸಿದ್ಧಪಡಿಸಿದ ಪಿಪಿಟಿ ಸಹ ವೀಕ್ಷಣೆ ಮಾಡಿದ ಸಿಎಂ, ಲೋಕೋಪಯೋಗಿ ಇಲಾಖೆಯಿಂದ ಯೋಜನೆ ಅಂದಾಜು ಮೊತ್ತ ತರಿಸಲು ಸೂಚಿಸಿದರು. ಲೋಕೋಪಯೋಗಿ ಇಲಾಖೆಯಿಂದ ಯೋಜನೆಯ ರೂಪುರೇಷೆ ತಯಾರದ ಬಳಿಕ ಮತ್ತೊಂದು ಸುತ್ತಿನ ಸಭೆ ಮಾಡೋಣ ಎಂದು ಸಿಎಂ ಬೊಮ್ಮಾಯಿ‌ ಸೂಚಿಸಿದರು.

ಸಿಎಂ ಭೇಟಿ ವೇಳೆ  ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಧಿರೇನ್ ರಾಜಕುಮಾರ್ ಸೇರಿದಂತೆ ಕೆಲವರು ಉಪಸ್ಥಿತರಿದ್ದರು.

Share