Connect with us


      
ದೇಶ

ರಾಷ್ಟ್ರಪತಿ ಚುನಾವಣೆ: ಭದ್ರತೆ ಮಧ್ಯೆ ದೆಹಲಿಗೆ ಹೊರಟ ದ್ರೌಪದಿ

Iranna Anchatageri

Published

on

ಭುವನೇಶ್ವರ್: ಜೂನ್ 23 (ಯು.ಎನ್‌.ಐ.) ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಅಭ್ಯರ್ಥಿ ದ್ರೌಪದಿ ಮುರ್ಮು ಅವರು ನಾಮಪತ್ರ ಸಲ್ಲಿಸಲು ಬಿಗಿ ಭದ್ರತೆಯ ನಡುವೆ ಗುರುವಾರ ದೆಹಲಿಗೆ ತೆರಳಿದರು.

ಎಂಸಿಎಲ್ ಗೆಸ್ಟ್ ಹೌಸ್ ನಿಂದ ಬಿಜು ಪಟ್ನಾಯಕ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುರ್ಮು ಆಗಮಿಸಿದರು. ಅವರ ಬೆಂಬಲಿಗರು, ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅವರ ಗೌರವಾರ್ಥವಾಗಿ ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಬುಡಕಟ್ಟು ಜಾನಪದ ನೃತ್ಯಗಳನ್ನು ಪ್ರದರ್ಶಿಸಲಾಯಿತು.

ದೆಹಲಿಗೆ ಹೊರಡುವ ಮೊದಲು ಮುರ್ಮು ಅವರು, ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಎಲ್ಲರ ಸಹಕಾರವನ್ನು ಕೋರಿದರು. ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಜಾರ್ಖಂಡ್ ಮಾಜಿ ಗವರ್ನರ್ ಮತ್ತು ಒಡಿಶಾದ ಮಾಜಿ ಸಚಿವರ ಹೆಸರನ್ನು ಬಿಜೆಪಿ ಮಂಗಳವಾರ ಪ್ರಕಟಿಸಿತ್ತು.

ಬಿಜು ಜನತಾ ದಳದ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈಗಾಗಲೇ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದ್ದಾರೆ. ರಾಜ್ಯದ ಎಲ್ಲಾ ಶಾಸಕರು ಹಾಗೂ ಪಕ್ಷದ ಗಡಿ ದಾಟಿ ಮತ ಚಲಾಯಿಸುವ ಮೂಲಕ ಅವರ ಗೆಲುವನ್ನು ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ದೆಹಲಿ ತಲುಪಿದ ನಂತರ, ಮುರ್ಮು ಅವರು ನಾಮಪತ್ರ ಸಲ್ಲಿಸುವವರೆಗೂ ಒಡಿಶಾ ಭವನದಲ್ಲಿ ಇರಲಿದ್ದಾರೆ.

Share