Connect with us


      
ದೇಶ

ರಾಜಸ್ಥಾನದಲ್ಲಿ ಲಘು ಭೂಕಂಪ: 3 ಸೆಕೆಂಡ್ ಕಂಪಿಸಿದ ಅನುಭವ – ಯಾವ ಭೂಕಂಪ ಅಪಾಯಕಾರಿ?

Iranna Anchatageri

Published

on

ಜೈಪುರ: ಫೆಬ್ರವರಿ 18 (ಯು.ಎನ್.ಐ.) ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಇಂದು ಬೆಳಗ್ಗೆ ಭೂಕಂಪನದ ಅನುಭವವಾಗಿದೆ. ಭೂಮಿ ಕಂಪಿಸಿದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.8 ದಾಖಲಾಗಿದೆ. ಬೆಳಗ್ಗೆ 8.1 ಗಂಟೆಗೆ ಲಘು ಭೂಕಂಪ ಸಂಭವಿಸಿದೆ. ಜೈಪುರ ಅಷ್ಟೇ ಅಲ್ಲದೆ, ಸಿಕರ್ ಮತ್ತು ಫತೇಪುರ್‌ನಲ್ಲಿಯೂ ಕಂಪಿಸಿದ ಅನುಭವವಾಗಿದೆ. ಸುಮಾರು 3 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವನ್ನು ಇಲ್ಲಿನ ಜನರು ಹಂಚಿಕೊಂಡಿದ್ದಾರೆ.  ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಾಜಿ ಪ್ರಕಾರ, ಭೂಕಂಪದ ಕೇಂದ್ರಬಿಂದು ಜೈಪುರದ ವಾಯುವ್ಯಕ್ಕೆ 92 ಕಿಮೀ ದೂರದಲ್ಲಿತ್ತು ಎಂದು ಹೇಳಿದೆ..

ಇದೇ ತಿಂಗಳು ಫೆಬ್ರವರಿ 5 ರಂದು ಜಮ್ಮು ಮತ್ತು ಕಾಶ್ಮೀರ, ನೋಯ್ಡಾ, ದೆಹಲಿಯಲ್ಲಿ ಪ್ರಬಲ ಭೂಕಂಪನದ ಅನುಭವವಾಗಿತ್ತು. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.7 ದಾಖಲಾಗಿತ್ತು. ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನ-ಪಾಕಿಸ್ತಾನದ ಗಡಿ ಭಾಗದಲ್ಲಿ ಕೇಂದ್ರಿಕೃತವಾಗಿತ್ತು.

ಯಾವ ಭೂಕಂಪ ಅಪಾಯಕಾರಿ?
ಭೂಕಂಪದ ಗರಿಷ್ಠ ತೀವ್ರತೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದಾಗ್ಯೂ, ರಿಕ್ಟರ್ ಮಾಪಕದಲ್ಲಿ 7.0 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಭೂಕಂಪವನ್ನು ಮಧ್ಯಮ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಪ್ರಮಾಣದಲ್ಲಿ 2 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಭೂಕಂಪವನ್ನು ಮೈಕ್ರೋ ಭೂಕಂಪ ಎಂದು ಕರೆಯಲಾಗುತ್ತದೆ, 4.5ರ ತೀವ್ರತೆಯ ಭೂಕಂಪವು ಮನೆಗಳಿಗೆ ಹಾನಿ ಮಾಡುತ್ತದೆ.

Share