Published
5 months agoon
By
Vanitha Jainಜಕಾರ್ತಾ, ಡಿಸೆಂಬರ್ 14(ಯು.ಎನ್.ಐ) ಪೂರ್ವ ಇಂಡೋನೇಷ್ಯಾದಲ್ಲಿ ಮಂಗಳವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಭೀತಿ ಎದುರಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆದರೆ ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಅಥವಾ ಹಾನಿಗಳು ಸಂಭವಿಸಿಲ್ಲ. ಇದು ಮೌಮೆರೆ ಪಟ್ಟಣದ ಉತ್ತರಕ್ಕೆ 100 ಕಿ.ಮೀ ದೂರದಲ್ಲಿ, ಫ್ಲೋರ್ಸ್ ಸಮುದ್ರದ 18.5 ಕಿ.ಮೀ ಆಳದಲ್ಲಿ, ಸುಮಾರು 112 ಕಿಮೀ (70 ಮೈಲುಗಳು) ಫ್ಲೋರ್ಸ್ ದ್ವೀಪದ ಪೂರ್ವ ಭಾಗದಲ್ಲಿ, 12 ಕಿಮೀ ಆಳದಲ್ಲಿ ಲಾರಂಟುಕಾ ಪಟ್ಟಣದ ವಾಯುವ್ಯಕ್ಕೆ ಭೂಕಂಪ ಸಂಭವಿಸಿದೆ ಎಂದು ಹೇಳಿದೆ.
ಮಲುಕು, ಪೂರ್ವ ನುಸಾ ತೆಂಗರಾ, ಪಶ್ಚಿಮ ನುಸಾ ತೆಂಗರಾ ಮತ್ತು ಆಗ್ನೇಯ ಮತ್ತು ದಕ್ಷಿಣ ಸುಲವೆಸಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.
1992ರಲ್ಲಿ ಮೌಮೆರಾದಲ್ಲಿ ಸಂಭವಿಸಿದ ಇದೇ ತೀವ್ರತೆಯ ಭೂಕಂಪದಿಂದಾಗಿ ಇಡೀ ಪಟ್ಟಣದ ಚಿತ್ರಣವೇ ಬದಲಾಗಿತ್ತು.
ಭೂಕಂಪದ ಅನುಭವ ಹಂಚಿಕೊಂಡ ಜನರು ಒಮ್ಮೆಲೆ ಅಲೆಗಲ ರೀತಿಯಲ್ಲಿ ಮೇಲೆ ಕೆಳಗೆ ಹೋದಂತೆ ಭಾಸವಾಯಿತು ಎಂದು ಹೇಳಿದರೆ, ದಕ್ಷಿಣ ಸುಲವೇಸಿಯ ಮಕಸ್ಸರ್ನಲ್ಲಿಯೂ ಭೂಕಂಪನದ ಅನುಭವವಾಗಿದೆ ಎಂದು ಜನರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಭೂಕಂಪದ ಸರ್ವೇ ನಡೆಸಿದ ಯುಎಸ್ ಜಿಯೋಲಾಜಿಕಲ್ ಭೂಕಂಪದ ತೀವ್ರತೆಯು 7.3 ರಷ್ಟಿತ್ತು ಎಂದು ಹೇಳಿದೆ. ಮೊದಲ ಭೂಕಂಪದ ನಂತರ ಲಾರಾಂಟುಕಾದಲ್ಲಿ 5.6 ತೀವ್ರತೆಯ ಕಂಪನವು ಉಂಟಾಗಿದೆ ಎಂದು ಇಂಡೋನೇಷ್ಯಾ ಸಂಸ್ಥೆ ತಿಳಿಸಿದೆ.
ನೇಪಾಳದ ನೆಲದಲ್ಲಿ ನಿಂತು ‘ರಾಮ ಮಂದಿರ’ ಪ್ರಸ್ತಾಪಿಸಿದ ಪ್ರಧಾನಿ ಮೋದಿ
ನೇರಪ್ರಸಾರದಲ್ಲಿ ಅಡುಗೆ ಮಾಡುವಾಗ ಹೊತ್ತಿಕೊಂಡ ಬೆಂಕಿ!, ಮಹಿಳೆಯ ಕಿರುಚಾಟ
ಗೋಧಿ ರಫ್ತು ನಿಷೇಧ ಬೆನ್ನಲ್ಲೇ ದಾಖಲೆ ಮಟ್ಟಕ್ಕೆ ಏರಿದ ಗೋಧಿ ಬೆಲೆ
ಇಂಡೋನೇಷ್ಯಾದಲ್ಲಿ ಕಂಬಕ್ಕೆ ಬಸ್ ಡಿಕ್ಕಿ: 15 ಸಾವು, 16 ಮಂದಿಗೆ ಗಾಯ
ಲುಂಬಿನಿಗೆ ಆಗಮಿಸಿದ ಮೋದಿಯವರಿಗೆ ದೇವುಬಾ ಭವ್ಯ ಸ್ವಾಗತ
ಪಾಕಿಸ್ತಾನದಲ್ಲಿ ಇಬ್ಬರು ಸಿಖ್ ನಾಗರಿಕರ ಹತ್ಯೆ