Connect with us


      




ವಿದೇಶ

ರಷ್ಯಾದ ಮೇಲೆ ಮತ್ತಷ್ಟು ಆರ್ಥಿಕ ದಿಗ್ಬಂಧನ!

Iranna Anchatageri

Published

on

ಕೈವ್/ಮಾಸ್ಕೋ/ವಾಷಿಂಗ್ಟನ್: ಮಾರ್ಚ್ 25 (ಯು.ಎನ್.ಐ.) ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸತತ 29ನೇ ದಿನವೂ ಮುಂದುವರೆದಿದೆ. ಪುಟಿನ್ ಸೈನ್ಯ ದಿನದಿಂದ ದಿನಕ್ಕೆ ಆಕ್ರಮಣಕಾರಿಯಾಗುತ್ತಿರುವಾಗ ಝೆಲೆನ್ಸ್ಕಿ ಕೂಡ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ. ಈ ಬಿಕ್ಕಟ್ಟಿನ ಕುರಿತು ನ್ಯಾಟೋ ಸಭೆಯಲ್ಲಿ ಝೆಲೆನ್ಸ್ಕಿ “ನೀವು ಜನರನ್ನು ರಕ್ಷಿಸಲು ಬಯಸುತ್ತೀರಿ ಎಂಬುದನ್ನು ಸಾಬೀತುಪಡಿಸಬೇಕು” ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ G-7 ದೇಶಗಳು ರಷ್ಯಾದ ಸೆಂಟ್ರಲ್ ಬ್ಯಾಂಕ್ ನ ವಹಿವಾಟಿನಲ್ಲಿ ಚಿನ್ನವನ್ನು ಬಳಸುವುದನ್ನು ನಿಷೇಧಿಸಿವೆ. ಈ ಮಧ್ಯೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಉಕ್ರೇನ್ ಮಂಡಿಸಿದ ನಿರ್ಣಯವನ್ನು ಅಂಗೀಕರಿಸಲಾಗಿದೆ.

ರಷ್ಯಾದ ವಿರುದ್ಧ ನಿಂತಿರುವ ಜಪಾನ್ ಕೂಡ ಹೆಚ್ಚುವರಿಯಾಗಿ ರಷ್ಯಾದ 25 ವ್ಯಕ್ತಿಗಳ ಆಸ್ತಿಗಳನ್ನು ಫ್ರೀಜ್ ಮಾಡಿದೆ. ಅಲ್ಲದೆ, 81 ಸಂಸ್ಥೆಗಳಿಗೆ ರಫ್ತು ಮಾಡುವುದಾಗಿ ನಿಷೇಧಿಸುವುದಾಗಿ ಜಪಾನಿನ ವಿದೇಶಾಂಗ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ OPEC ನ ಪ್ರಮುಖ ಪಾತ್ರವನ್ನು ಚರ್ಚಿಸಿದ G-7 ನಾಯಕರು ತೈಲ ಮತ್ತು ಅನಿಲ ಉತ್ಪಾದಿಸುವ ದೇಶಗಳು ಜವಾಬ್ದಾರಿಯುತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಕಚ್ಚಾ ತೈಲದ ವಿತರಣೆಯನ್ನು ಹೆಚ್ಚಿಸಲು ಕರೆ ನೀಡಿದರು ಎಂದು G-7 ನಾಯಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿ20 ಗುಂಪಿನಿಂದ ರಷ್ಯಾವನ್ನು ಕೈಬಿಡಬೇಕೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಕೇಳಿದಾಗ, “ನನ್ನ ಉತ್ತರ ಹೌದು. ಅದು ಜಿ20 ಮೇಲೆ ಅವಲಂಬಿತವಾಗಿದೆ” ಎಂದು ಹೇಳಿದರು. ಇಂಡೋನೇಷ್ಯಾ ಮತ್ತು ಇತರ ದೇಶಗಳು ರಷ್ಯಾವನ್ನು ತೆಗೆದುಹಾಕಲು ಒಪ್ಪದಿದ್ದರೆ, ಉಕ್ರೇನ್ ಹಿತದೃಷ್ಟಿಯಿಂದಾಗಿ ಸಭೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಬಿಡೆನ್ ಹೇಳಿದರು. ಉಕ್ರೇನ್‌ನಲ್ಲಿ ರಷ್ಯಾ ರಾಸಾಯನಿಕ ಅಸ್ತ್ರ ಬಳಸಿದರೆ ನಾವು ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ ಎಂದೂ ಸಹ ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.

Share