Connect with us


      




ದೇಶ

5 ರಾಜ್ಯಗಳ ಚುನಾವಣೆ, ನಾಮಿನೇಷನ್ ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶ

UNI Kannada

Published

on

ನವದೆಹಲಿ : ಜನೆವರಿ 08 (ಯು.ಎನ್.ಐ.) ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿರುವ ಕೇಂದ್ರ ಚುನಾವಣಾ ಆಯೋಗ, ಕೋವಿಡ್ ಸಂದರ್ಭದಲ್ಲಿ ವಿಧಾನ ಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ.

ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕೋವಿಡ್ ಹಿನ್ನೆಲೆ ತಮ್ಮ ನಾಮಿನೇಷನ್ ಅನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು ಎಂದು ಸಿಇಸಿ ಸುಶೀಲ್ ಚಂದ್ರ ತಿಳಿಸಿದ್ದಾರೆ. ಪೋಲಿಂಗ್ ಬೂತ್ ಗಳನ್ನು ಶೇ. 16ರಷ್ಟು ಹೆಚ್ಚಿಸಿರುವ ಕಾರಣ ಪ್ರತಿ ಪೋಲಿಂಗ್ ಬೂತ್ ನಲ್ಲಿ ಮತದಾರರ ಸಂಖ್ಯೆಯನ್ನು ಇಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ ಉತ್ತರ ಪ್ರದೇಶ, ಉತ್ತರಖಂಡ್, ಪಂಜಾಬ್ ರಾಜ್ಯಗಳಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನ 40 ಲಕ್ಷಕ್ಕೆ ನಿಗದಿಪಡಿಸಿದ್ದಾರೆ. ಗೋವಾ, ಮಣಿಪುರ್ ರಾಜ್ಯಗಳಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನ 28 ಲಕ್ಷಗಳಿಗೆ ನಿಗದಿಪಡಿಸಿದೆ. ಇನ್ನೂ ಚುನಾವಣಾ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಿಇಸಿ ಸುಶೀಲ್ ಚಂದ್ರ ತಿಳಿಸಿದ್ದಾರೆ.

Share