Connect with us


      
ರಾಜಕೀಯ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ; ಫೆಬ್ರವರಿ 10ರಿಂದ ಆರಂಭ

Vanitha Jain

Published

on

ನವದೆಹಲಿ: ಜನೆವರಿ 08 (ಯು.ಎನ್.ಐ.) ಜನರ ಕುತೂಹಲ ಕೆರಳಿಸುತ್ತಿರುವ ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಕೇಂದ್ರ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು.

ವೇಳಾಪಟ್ಟಿಯ ಪ್ರಕಾರ, ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಮತದಾನ ನಡೆಯಲಿದೆ. ಐದು ರಾಜ್ಯಗಳ ಚುನಾವಣೆಯು 7 ಹಂತಗಳಲ್ಲಿ ಪೂರ್ಣಗೊಳ್ಳಲಿದೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಣಿಪುರದ 60 ಕ್ಷೇತ್ರಗಳಿಗೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಗೋವಾ (40 ಸ್ಥಾನಗಳು), ಪಂಜಾಬ್ (117 ಸ್ಥಾನಗಳು) ಮತ್ತು ಉತ್ತರಾಖಂಡ್ (70 ಸ್ಥಾನಗಳು) ಫೆಬ್ರವರಿ 14 ರಂದು ನಡೆಯಲಿದೆ. ಎಲ್ಲಾ ಐದು ವಿಧಾನಸಭಾ ಚುನಾವಣೆಗಳ ಎಣಿಕೆಯು ಮಾರ್ಚ್ 10 ರಂದು ನಡೆಯುತ್ತದೆ.

ಉತ್ತರ ಪ್ರದೇಶದಲ್ಲಿ ಆರರಿಂದ ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು, ಪಂಜಾಬ್‍ನಲ್ಲಿ ಎರಡರಿಂದ ಮೂರು ಹಂತಗಳಲ್ಲಿ ಮಣಿಪುರದಲ್ಲಿ ಎರಡು ಹಂತಗಳಲ್ಲಿ, ಗೋವಾ ಮತ್ತು ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿವೆ.

ಒಟ್ಟಾರೆಯಾಗಿ, 690 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಐದು ರಾಜ್ಯಗಳಲ್ಲಿ 8.5 ಕೋಟಿ ಮಹಿಳೆಯರು ಸೇರಿದಂತೆ 18.3 ಕೋಟಿ ಜನರು ತಮ್ಮ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಮತದಾನ ಕೇಂದ್ರಗಳ ಸಂಖ್ಯೆಯನ್ನು ಶೇ.16ರಷ್ಟು ಹೆಚ್ಚಿಸಲಾಗಿದೆ. ಒಟ್ಟು 1,620 ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. . 24.5 ಲಕ್ಷ ಮತದಾರರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ. 2,15,368 ಮತಗಟ್ಟೆ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಹಿರಿಯ ನಾಗರಿಕರು (80+), ಅಂಗವೈಕಲ್ಯರು ಮತ್ತು ಕೋವಿಡ್ ಪೀಡಿತರಿಗೆ ಅಂಚೆ ಮತಪತ್ರ ಸೌಲಭ್ಯ ಲಭ್ಯವಿರುತ್ತದೆ. 1,620 ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಉತ್ತರ ಪ್ರದೇಶ
ಹಂತ 1
(58 ವಿಧಾನಸಭಾ ಕ್ಷೇತ್ರಗಳು)
ಮತದಾನ- ಫೆಬ್ರವರಿ 10

ಹಂತ 2
(55 ವಿಧಾನಸಭಾ ಕ್ಷೇತ್ರಗಳು)
ಮತದಾನ – ಫೆಬ್ರವರಿ 14

ಹಂತ 3
(59 ವಿಧಾನಸಭಾ ಕ್ಷೇತ್ರಗಳು)
ಮತದಾನ – ಫೆಬ್ರವರಿ 20

ಹಂತ 4
(60 ವಿಧಾನಸಭಾ ಕ್ಷೇತ್ರಗಳು)
ಮತದಾನ – ಫೆಬ್ರವರಿ 23

ಹಂತ 5
(60 ವಿಧಾನಸಭಾ ಕ್ಷೇತ್ರಗಳು)
ಮತದಾನ – ಫೆಬ್ರವರಿ 27

ಹಂತ 6
(57 ವಿಧಾನಸಭಾ ಕ್ಷೇತ್ರಗಳು)
ಮತದಾನ – ಮಾರ್ಚ್ 3

ಹಂತ 7
(54 ವಿಧಾನಸಭಾ ಕ್ಷೇತ್ರಗಳು)
ಮತದಾನ – ಮಾರ್ಚ್ 7

********
ಮಣಿಪುರ

ಹಂತ 1
(38 ವಿಧಾನಸಭಾ ಕ್ಷೇತ್ರಗಳು)
ಮತದಾನ – ಫೆಬ್ರವರಿ 27

ಹಂತ 2
(22 ವಿಧಾನಸಭಾ ಕ್ಷೇತ್ರಗಳು)
ಮತದಾನ- ಮಾರ್ಚ್ 3

*******
ಪಂಜಾಬ್

ಹಂತ 1
(117 ವಿಧಾನಸಭಾ ಕ್ಷೇತ್ರಗಳು)
ಮತದಾನದ – ಫೆಬ್ರವರಿ 14

********
ಗೋವಾ

ಹಂತ 1
(40ವಿಧಾನಸಭಾ ಕ್ಷೇತ್ರಗಳು)
ಮತದಾನ – ಫೆಬ್ರವರಿ 14

**
ಉತ್ತರಾಖಂಡ

ಹಂತ 1
(70 ವಿಧಾನಸಭಾ ಕ್ಷೇತ್ರಗಳು)
ಮತದಾನ – ಫೆಬ್ರವರಿ 14

Share