Published
6 months agoon
ವೈರಲ್ ವಿಡಿಯೋ, ಜನವರಿ 03 (ಯು.ಎನ್.ಐ.) ಆನೆಗಳು ಕಾಡಿನಲ್ಲಿ ನಡೆಯುವುದನ್ನು ನಾವು-ನೀವು ನೋಡಿದ್ದೇವೆ. ಆದರೆ ಆನೆ ‘ಟೋಲ್ ಟ್ಯಾಕ್ಸ್’ ವಸೂಲಿ ಮಾಡಿದ್ದನ್ನು ನೀವು ನೋಡಿದ್ದೀರಾ? ಈ ವಿಶಿಷ್ಠವಾದ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಆನೆಯೊಂದು ಪ್ರಯಾಣಿಕರನ್ನು ರಸ್ತೆಯಲ್ಲಿ ಸಾಗಲು ಬಿಡದೆ ಕಾರು ಚಾಲಕನಿಂದ ‘ಟೋಲ್ ಟ್ಯಾಕ್ಸ್’ ಪಡೆದುಕೊಂಡಿದೆ. ಆನೆ ರಸ್ತೆಯ ಮೇಲೆ ನಿಂತುಕೊಂಡು ಹಾದುಹೋಗುವ ಜನರ ಮೇಲೆ ಕಣ್ಣಿಟ್ಟಿರುವುದನ್ನು ದೃಶ್ಯದಲ್ಲಿ ಕಾಣಬಹುದು. ಟೋಲ್ ವಸೂಲಿಗೆ ನಿಂತವರಂತೆ ರಸ್ತೆಯ ಮೇಲೆ ಈ ಗಜರಾಜ ನಿಗಾವಹಿಸಿದ್ದಾನೆ. ದೇಶದ ಯಾವುದೇ ಭಾಗದಲ್ಲಿನ ಎಕ್ಸ್ಪ್ರೆಸ್ವೇ ಅಥವಾ ಹೆದ್ದಾರಿಯನ್ನು ಬಳಸಿದರೆ ಅದಕ್ಕಾಗಿ ನಾವು ಟೋಲ್ ತೆರಿಗೆ ಪಾವತಿಸಬೇಕು.
ಕಾಡಿನ ಹೆದ್ದಾರಿಯಲ್ಲಿ ಆನೆಯೊಂದು ‘ಟೋಲ್ ಟ್ಯಾಕ್ಸ್’ ಸಂಗ್ರಹಿಸುವ ದೃಶ್ಯ ತುಂಬಾ ಮುದ್ದಾಗಿದೆ. ಈ ವೀಡಿಯೋವನ್ನು ಹಲವರು ಲೈಕ್ ಮಾಡುತ್ತಿದ್ದಾರೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದು, ‘ಸ್ವೀಟೆಸ್ಟ್ ಟೋಲ್ ಸಂಗ್ರಹ’ ಎಂಬ ಶೀರ್ಷಿಕೆ ನೀಡಿದ್ದಾರೆ. ಕೇವಲ 9 ಸೆಕೆಂಡ್ಗಳ ಈ ವೀಡಿಯೋವನ್ನು ಇದುವರೆಗೆ 10 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 900ಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಜನ್ರು ತಮಾಷೆಯ ಕಾಮೆಂಟ್ಗಳನ್ನು ಸಹ ಮಾಡಿದ್ದಾರೆ. ಒಬ್ಬ ಟ್ವಿಟ್ಟರ್ ಬಳಕೆದಾರ, ‘ಇಟ್ಟುಕೊಳ್ಳಬೇಕು.. ನಾವು ರಸ್ತೆಯ ಮೂಲಕ ಹೊರಗೆ ಹೋದಾಗಲೆಲ್ಲಾ, ಬೇಳೆ… ಬಾಳೆಹಣ್ಣು…. ಇಟ್ಟುಕೊಳ್ಳಿ… ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾನೆ.
Sweetest toll collection 😅 pic.twitter.com/fEMzPUJdge
— Dipanshu Kabra (@ipskabra) January 3, 2022
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!