Published
1 week agoon
ಹೊಸದಿಲ್ಲಿ: ಮೇ 13 (ಯು.ಎನ್.ಐ.) ಟೆಸ್ಲಾ ಮುಖ್ಯಸ್ಥ ಮತ್ತು ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರು ಕಳೆದ ತಿಂಗಳು ಟ್ವಿಟರ್ ಖರೀದಿಸಲು ಮಾಡಿದ್ದ $44 ಬಿಲಿಯನ್ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ.
ಎಲೋನ್ ಮಸ್ಕ್ ಅವರ ಈ ಟ್ವೀಟ್ ನಿಂದಾಗಿ ಟ್ವಿಟರ್ನ ಷೇರುಗಳು ಪ್ರಿಮಾರ್ಕೆಟ್ ವಹಿವಾಟಿನಲ್ಲಿ 20% ಕುಸಿದಿದೆ. ಆದರೆ ಎಲೋನ್ ಮಸ್ಕ್ ಅವರ ಈ ಹೇಳಿಕೆಗೆ ಇದುವರೆಗೂ ಟ್ವಿಟ್ಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ತಿಂಗಳ ಆರಂಭದಲ್ಲಿ, ಟ್ವಿಟ್ಟರ್ ಕಂಪನಿಯ ಹಣಗಳಿಸಬಹುದಾದ (ಮೊನೊಟೈಸೇಷನ್) ದೈನಂದಿನ ಸಕ್ರಿಯ ಬಳಕೆದಾರರಲ್ಲಿ ನಕಲಿ ಅಥವಾ ಸ್ಪ್ಯಾಮ್ ಖಾತೆಗಳ ಸಂಖ್ಯೆಯು ಮೊದಲ ತ್ರೈಮಾಸಿಕದಲ್ಲಿ 5% ಕ್ಕಿಂತ ಕಡಿಮೆಯಿತ್ತು ಎಂದು ಟ್ವಿಟ್ಟರ್ ಅಂದಾಜಿಸಿದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಟ್ವಿಟರ್ನಿಂದ “ಸ್ಪ್ಯಾಮ್ ಬಾಟ್ಗಳನ್ನು” ತೆಗೆದುಹಾಕುವುದು ಅವರ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದರು. ಈ ಕಾರಣದಿಂದಾಗಿ ಟ್ವಿಟ್ಟರ್ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ತಡೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಅಮೆಜಾನ್ ; ಗ್ರಾಹಕರ ದೂರುಗಳಿಗೆ ತುರ್ತು ಸ್ಪಂದಿಸಲು ಕೇಂದ್ರ ಸೂಚನೆ
ಡೊನಾಲ್ಡ್ ಟ್ರಂಪ್ ಟ್ವಿಟರ್ ನಿಷೇಧ ತೆಗೆದು ಹಾಕುತ್ತೇವೆ: ಮಸ್ಕ್
1000ಕ್ಕೂ ಹೆಚ್ಚು ಶಾಖೆ ತೆರೆದ ಎಚ್ಡಿಎಫ್ಸಿ..!
ಸ್ವಿಗ್ಗಿ; ಡ್ರೋನ್ ಮೂಲಕ ದಿನಸಿ ವಿತರಣಾ ಸೇವೆಗೆ ಸಿದ್ಧ
ಬೆಂಗಳೂರಿಗರಿಗೆ ಸಿಗಲಿದೆ ಶೀಘ್ರ ಡ್ರೋನ್ ಮೂಲಕ ಆಹಾರ!
61,000 ಕೋಟಿ ರೂ. ಮೊತ್ತದ ಇಒಐ ನಿರೀಕ್ಷೆ, 12,000 ಉದ್ಯೋಗ ಸೃಷ್ಟಿ