Connect with us


      
ವಿದೇಶ

ಹಿಮಪಾತದಲ್ಲಿ ಸಿಲುಕಿದ ವಾಹನಗಳು; 20 ಮಂದಿ ಸಾವು; ತುರ್ತು ಪರಿಸ್ಥಿತಿ ಘೋಷಣೆ

Vanitha Jain

Published

on

ಮುರ್ರೆ: ಜನೆವರಿ 08 (ಯು.ಎನ್.ಐ.) ಪಾಕಿಸ್ತಾನದ ಜನಪ್ರಿಯ ಪ್ರವಾಸಿ ತಾಣವಾದ ಮುರ್ರೆಯಲ್ಲಿ ರಾತ್ರಿ ಇಡೀ ಸುರಿದ ಹಿಮಪಾತದ ನಡುವೆ ವಾಹನಗಳು ಸಿಲುಕಿಕೊಂಡು ವಾಹನದಲ್ಲಿದ್ದ ಕನಿಷ್ಟ 20 ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ತೀವ್ರ ಹಿಮಪಾತದಿಂದಾಗಿ ಸ್ಥಳೀಯರು ಮತ್ತು ಪ್ರವಾಸಿಗರು ಎದುರಿಸುತ್ತಿರುವ ಸಂಕಷ್ಟದಿಂದಾಗಿ ಹಾಗೂ ಅನೇಕ ಸಾವುಗಳು ಸಂಭವಿಸಿದ ಕಾರಣ ಮುರ್ರೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಭಾರೀ ಹಿಮದ ಹೊದಿಕೆಗಳ ಅಡಿಯಲ್ಲಿ ಕಾರುಗಳು ಹೂತು ಹೋಗಿವೆ. ಇದರಿಂದ ಉಸಿರಾಟದ ತೊಂದರೆ ಅನುಭವಿಸಿದ ಕಾರಣ ಸಾವನ್ನಪ್ಪಿದ್ದಾರೆ. ಉಸಿರುಗಟ್ಟುವಿಕೆಯೇ ಪ್ರವಾಸಿಗರ ಅವರ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೋಟರ್‍ವೇ ಪೊಲೀಸ್ (ಎನ್ ಎಚ್ ಎಮ್ ಪಿ) ಇನ್ಸ್‍ಪೆಕ್ಟರ್ ಜನರಲ್ ಇನಾಮ್ ಘನಿ, ಸದ್ಯಕ್ಕೆ ಮುರ್ರೆಗೆ ಪ್ರಯಾಣಿಕರಿಗೆ ನಿಷೇಧ ಹೇರಲಾಗಿದೆ ಮತ್ತು ಹಿಲ್ ರೆಸಾರ್ಟ್‍ಗೆ ಹೋಗುವ ಎಲ್ಲಾ ಮಾರ್ಗಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು.

ಮುರ್ರೆಯು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನಿಂದ ಈಶಾನ್ಯಕ್ಕೆ 60 ಕಿಲೋಮೀಟರ್ ದೂರದಲ್ಲಿದೆ, ಮುರ್ರೆ ಪ್ರತಿ ವರ್ಷ ಚಳಿಗಾಲದಲ್ಲಿ ಹಿಮಪಾತದಿಂದ ತುಂಬುವುದರಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

Share