Published
4 months agoon
ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು ತೆಗೆದು ಹಾಕಲಾಗಿದೆ. ಇದಲ್ಲದೇ ಈಗ ಶೇ.50ರಷ್ಟು ಸಾಮರ್ಥ್ಯದೊಂದಿಗೆ ಸಿನಿಮಾ ಥಿಯೇಟರ್ ಗಳನ್ನು ತೆರೆಯಲು ಅನುಮತಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 7,498 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 29 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ದೆಹಲಿಯಲ್ಲಿ ಬುಧವಾರ 5,760 ಕೊರೊನಾ ಪ್ರಕರಣಗಳು ದಾಖಲಾಗಿ 30 ಜನರು ಸಾವಿಗೀಡಾಗಿದ್ದರು.
ಡಿಡಿಎಂಎ ಸಭೆಯಲ್ಲಿ ಮಹತ್ವದ ನಿರ್ಧಾರ
ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ದೆಹಲಿಯಲ್ಲಿ ಕೋವಿಡ್ ಗೈಡ್ ಲೈನ್ಸ್ ಗಳನ್ನು ಸಡಿಲಗೊಳಿಸಬೇಕೆಂಬ ಬಲವಾದ ಬೇಡಿಕೆ ಕೇಳಿಬಂದಿತ್ತು. ಈ ಒತ್ತಡಕ್ಕೆ ಮಣಿದಿರುವ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಇಂದು ಮಹತ್ವದ ಸಭೆ ನಡೆಸಿತು. ಈ ಮಹತ್ವದ ಸಭೆಯಲ್ಲಿ ವಾರಾಂತ್ಯದ ಕರ್ಫ್ಯೂ ತೆಗೆದುಹಾಕುವುದು ಸೇರಿದಂತೆ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಆದರೆ, ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮುಂದುವರಿಯುಲಿದೆ.
ದೆಹಲಿಯಲ್ಲಿ ಯಾವ್ಯಾವ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ?
– ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆ 5 ರವರೆಗಿನ ವಾರಾಂತ್ಯದ ಕರ್ಫ್ಯೂನ್ನು ರದ್ದುಪಡಿಸಲಾಗಿದೆ.
– ಮದುವೆ ಸಮಾರಂಭದಲ್ಲಿ 200 ಜನರ ಮಿತಿ. ಈವರೆಗೆ ಇದ್ದ 15 ಮಂದಿ ಪಾಲ್ಗೊಳ್ಳಲು ಹಾಕಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.
– ದೆಹಲಿಯಲ್ಲಿ ಸಿನಿಮಾ ಹಾಲ್ ತೆರೆಯಲು ಅವಕಾಶ. ಆದರೆ, ಶೇ.50ರಷ್ಟು ಸಾಮರ್ಥ್ಯ ಹೊಂದಿರುವುದು ಕಡ್ಡಾಯ.
– ಬಾರ್ ಮತ್ತು ರೆಸ್ಟೋರೆಂಟ್ಗಳು ಶೇಕಡಾ 50ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ನಿರ್ದೇಶನ.
ದೆಹಲಿಯಲ್ಲಿ ಯಾವ್ಯಾವ ನಿರ್ಬಂಧಗಳು ಮುಂದುವರಿಯಲಿವೆ?
– ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಶಾಲೆ ತೆರೆಯುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆ
– ರಾತ್ರಿ ಕರ್ಫ್ಯೂ ದೆಹಲಿಯಲ್ಲಿ ಮುಂದುವರಿಯಲಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ನೇತೃತ್ವದಲ್ಲಿ ನಡೆದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಉಪಸ್ಥಿತರಿದ್ದರು. ಡಿಡಿಎಂಎ ಇಂದು ಸಂಜೆ ಅಥವಾ ಶುಕ್ರವಾರ ಬೆಳಗ್ಗೆ ಆದೇಶ ಹೊರಡಿಸುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ಈಗಿರುವ ನಿರ್ಬಂಧಗಳು ಮುಂದುವರಿಯಲಿವೆ.
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆ ಕುರಿತು ಹೈಕಮಾಂಡ್ ಜೊತೆ ಸಿಎಂ ಚರ್ಚೆ
ಜ್ಞಾನವಾಪಿ ಮಸೀದಿ ಪ್ರಕರಣ ವಿಚಾರಣೆ ಜಿಲ್ಲಾ ನ್ಯಾಯಾಲಯಕ್ಕೆ ಹಸ್ತಾಂತರಿಸಿದ ಸುಪ್ರೀಂಕೋರ್ಟ್
ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಅನಿಲ್ ಬೈಜಾಲ್ ರಾಜೀನಾಮೆ
ಅಮೆರಿಕದಲ್ಲಿ 10 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ
ಕೇಜ್ರಿವಾಲ್, ಶರದ್ ಪವಾರ್ ಮೇಲೆ ಸಚಿವ ಧರ್ಮೇಂದ್ರ ಪ್ರಧಾನ್ ‘ಕಪಾಳಮೋಕ್ಷ’
ದೆಹಲಿಯಲ್ಲಿ ನೆತ್ತಿ ಸುಡುತ್ತಿರುವ ಬಿರುಬೇಸಿಗೆ