Connect with us


      
ಕರ್ನಾಟಕ

“ಭಾರತವನ್ನು ಪಾಕಿಸ್ತಾನವಾಗಲು ಬಿಡಲ್ಲ” – ಕೆ.ಎಸ್.ಈಶ್ವರಪ್ಪ

Iranna Anchatageri

Published

on

ಬೆಳಗಾವಿ (ಸುವರ್ಣ ವಿಧಾನಸೌಧ) ಡಿಸೆಂಬರ್ 13 (ಯು.ಎನ್.ಐ.) ಆಡಳಿತರೂಢ ಬಿಜೆಪಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ತುದಿಗಾಲಿನಲ್ಲಿ ನಿಂತಿದೆ. ಆದರೆ, ಕಾಂಗ್ರೆಸ್ ನಾಯಕರು ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಬಿಜೆಪಿ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾನೂನಿನ ಹಿಂದೆ ದುರುದ್ದೇಶ ಅಡಗಿದೆ ಎಂದು ದೂರಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಲ್ಲ ಅಂತಾ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ಅಧಿವೇಶನ ತೀವ್ರ ಕುತೂಹಲ ಕೆರಳಿಸಿದ್ದು, ಮತಾಂತರ ಕಾಯ್ದೆ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಜಟಾಪಟಿಗೆ ಕಾರಣವಾಗುವುದು ಬಹುತೇಕ ಖಚಿತವಾಗಿದೆ.

ಈ ಮಧ್ಯೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ದೇಶದಲ್ಲಿ ಆಗುತ್ತಿರುವ ಬಲವಂತದ ಮತಾಂತರವನ್ನು ಬಲವಾಗಿ ಟೀಕಿಸಿದ್ದಾರೆ. ಭಾರತವನ್ನು ಪಾಕಿಸ್ತಾನ ಆಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಶೇಕಡಾ 24ರಷ್ಟು ಇದ್ದಂತಹ ಹಿಂದೂಗಳ ಸಂಖ್ಯೆ ಈಗ 3ಕ್ಕೆ ಕುಸಿದಿದೆ. ಅಲ್ಲಿ ಕೊಲೆ, ಸುಲಿಗೆ, ಬಲವಂತದ ಮತಾಂತರದಿಂದ ಪಾಕಿಸ್ತಾನದಲ್ಲಿ ಶೇಕಡಾ 3ಕ್ಕೆ ಇಳಿದಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಇನ್ನು ಕಾಂಗ್ರೆಸ್ ನೀತಿಯ ಬಗ್ಗೆ ಖಂಡಿಸಿದ ಅವರು, ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದ್ದೀರಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುತ್ತೇವೆ. ಮುಗ್ದರನ್ನು ಮತಾಂತರವಾಗಲು ಬಿಡಲ್ಲ. ಆಸೆ ಆಮಿಷಗಳನ್ನು ತೋರಿಸಿ, ಕಾಲು ಹೋಗಿದ್ದರೆ ಕಾಲು ಕೊಡುತ್ತಾನೆ ಏಸು, ಲವ್ ಜಿಹಾದ್ ಮಾಡಿದ್ರೆ ಇಡೀ ಜೀವನವನ್ನೇ ಸಾಕುತ್ತೇನೆ ಎಂಬ ಮುಸಲ್ಮಾನರ ಆಶ್ವಾಸನೆಗಳನ್ನು ಹಿಂದೂ ಸಂಘಟನೆಗಳು ಟೀಕಿಸುತ್ತಿವೆ. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಸಂಬಂಧ ಬಿಜೆಪಿ ಇದ್ದೂ ಕೂಡ ಕರ್ನಾಟಕದಲ್ಲಿ ಸೊಕ್ಕಿನಿಂದ, ದುಡ್ಡಿನಿಂದ, ಲವ್ ಜಿಹಾದ್ ಮೂಲಕ ಬಡವರು  ಬಲಿಪಶು ಆಗಲು ಬಿಡಲ್ಲ. ರಾಜ್ಯದಲ್ಲಿ ಖಂಡಿತವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಿದ್ದೇವೆ. ಈ ಮೂಲಕ ಹಿಂದೂ ಧರ್ಮವನ್ನು ರಕ್ಷಿಸುವುದಷ್ಟೇ ಅಲ್ಲದೆ, ಭಾರತವನ್ನು ಭಾರತವಾಗಿ ಉಳಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಹಿಂದೂ ಹೆಣ್ಣು ಮಕ್ಕಳಿಗೆ ಆಸೆ ಆಮಿಷಗಳನ್ನು ತೋರಿಸಿ ಮದುವೆ ಮಾಡಿಕೊಳ್ಳಲಾಗುತ್ತದೆ. ನಂತರ ಮತಾಂತರ ಮಾಡಿ, ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನನ್ನ ಜೊತೆಗೆ ಬಂದರೆ ಸಾಕ್ಷಿ ಸಮೇತ ತೋರಿಸುತ್ತೇನೆ ಎಂಬ ಸವಾಲನ್ನು ಈಶ್ವರಪ್ಪ ಮಾಡಿದರು.

ಮುಸ್ಲಿಂ, ಕ್ರಿಶ್ಚಿಯನ್ ವೋಟ್ ಗಾಗಿ ಕಾಂಗ್ರೆಸ್ ಇಷ್ಟು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದರಿಂದ ಕಾಂಗ್ರೆಸ್ ಪಕ್ಷವನ್ನು ಜನರು ಮೂಲೆಗೆ ತಳ್ಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಒಬ್ಬ ಎಂಪಿ ಇಲ್ಲ.. ಎಂಎಲ್ಎನೂ ಇಲ್ಲ. ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷದ ಮಟ್ಟಕ್ಕೆ ಹೋಗಿರುವ ಕಾಂಗ್ರೆಸ್, ಹಿಂದೂಗಳಿಗೆ ಅನ್ಯಾಯ ಮಾಡಿ ಮುಸ್ಲಿಂರನ್ನು ಹಾಗೂ ಕ್ರಶ್ಚಿಯನ್ ರನ್ನು ತೃಪ್ತಿಪಡಿಸುತ್ತಿರುವುದರಿಂದಲೇ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ಇದರಿಂದ ಬುದ್ಧಿ ಕಲಿತಿಲ್ಲ ಎಂದು ಈಶ್ವರಪ್ಪ ಕಾಂಗ್ರೆಸ್ ನಡೆಯನ್ನು ಟೀಕಿಸಿದರು.

ಹಿಂದೂಸ್ತಾನವನ್ನು ಪಾಕಿಸ್ತಾನ ಮಾಡಲು ಬಿಡುವುದಿಲ್ಲ. ಹಿಂದೂಗಳ ರಕ್ಷಣೆ ಮಾಡುವ ಸಂಬಂಧ ಮತಾಂತರ ಕಾಯ್ದೆಯನ್ನು ಜಾರಿಗೆ ತರುತ್ತವೆ. ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಇದೆ. ಪರಿಷತ್ ನಲ್ಲೂ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತವೆ. ಈ ಮೂಲಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡುತ್ತೇವೆ ಎಂದು ಈಶ್ವರಪ್ಪ ತಿಳಿಸಿದರು.

ರಾಹುಲ್ ಗಾಂಧಿ ಹಿಂದೂ ಎಂದು ಹೇಳಿಕೊಳ್ಳುತ್ತಿರುವುದು ಸಂತಸ. ಹಿಂದುತ್ವ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗಾದ್ರೆ ಸುಪ್ರೀಂಕೋರ್ಟ್ ನಿರ್ಧಾರವನ್ನು ರಾಹುಲ್ ಗಾಂಧಿ ಮೀರುತ್ತಾರೆಯೇ ಎಂದು ಪ್ರಶ್ನೆ ಮಾಡಿದ ಅವರು, ರಾಹುಲ್ ಗಾಂಧಿ ನಾಟಕ ಕ್ರಿಶ್ಚಿಯನ್ ಹಾಗೂ ಮುಸ್ಲೀಂ ವೋಟ್ ಗಳ ಜೊತೆ ಹಿಂದೂ ವೋಟು ಪಡೆಯುವದಾಗಿದೆ ಎಂದು ಆರೋಪಿಸಿದರು. ಸುಪ್ರೀಂಕೋರ್ಟ್ ಕೊಟ್ಟಿರುವ ಹೇಳಿಕೆಯನ್ನು ರಾಹುಲ್ ಗಾಂಧಿ, ಸಿದ್ದರಾಮಯ್ಯ ಒಪ್ಪಲಿ. ಇದನ್ನೆಲ್ಲ ಬಿಟ್ಟು.. ನಾನು ಹಿಂದೂ. ಆದರೆ ಹಿಂದುತ್ವ ಒಪ್ಪುವುದಿಲ್ಲ. ಹಿಂದೂತ್ವವಾದವನ್ನು ಸುಪ್ರೀಂಕೋರ್ಟ್ ಒಪ್ಪಿದರೆ ನೀವು ಅದನ್ನು ವಿರೋಧಿಸುತ್ತೀರಾ ಹಾಗಾದ್ರೆ ಎಂದು ಈಶ್ವರಪ್ಪ, ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದರು.

Share