Connect with us


      




ಕರ್ನಾಟಕ

ವೋಟ್ ಹಾಕುವ ಸ್ವಾತಂತ್ರ್ಯ ಸಿಕ್ಕರೆ ಸಾಲದು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ

UNI Kannada

Published

on

ಬೆಂಗಳೂರು: ಫೆಬ್ರವರಿ 26 (ಯು.ಎನ್.ಐ.)ವೋಟ್ ಹಾಕುವ ಸ್ವಾತಂತ್ರ್ಯ ಸಿಕ್ಕರೆ ಸಾಲದು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಆಗ ಮಾತ್ರ ಜಾತ್ಯಾತೀತ ಸಮಾಜ ನಿರ್ಮಾಣವಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ಬೆಂಗಳೂರಿನ ಲಿಡ್ಕರ್ ಭವನದಲ್ಲಿ ಮಾತನಾಡಿ ಎಸ್ ಟಿಪಿ, ಟಿಎಸ್ ಪಿ ಅನುಷ್ಠಾನಗೊಳಿಸಲು ಸಭೆ ನಡೆಸಲಾಗುತ್ತಿದೆ ಇದು ದೇಶದೆಲ್ಲೆಡೆ ಚರ್ಚೆ ಆಗಬೇಕು ಎಂದರು, ಈ ಸಂದರ್ಭದಲ್ಲಿ ಅಂಬೇಡ್ಕರ್ ರವರ ಒಂದು ಮಾತು ನೆನಪಾಗುತ್ತಿದೆ, ವೋಟ್ ಹಾಕುವ ಸ್ವಾತಂತ್ರ್ಯ ಸಿಕ್ಕರೆ ಸಾಲದು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು
ಆಗ ಮಾತ್ರ ಜಾತ್ಯಾತೀತ ಸಮಾಜ ನಿರ್ಮಾಣವಾಗುತ್ತೆ . ನಮ್ಮ ಸಮಾಜ ಅಸಮಾನತೆಯಿಂದ ಕೂಡಿರುವ ಸಮಾಜ
ಇವೆಲ್ಲವೋ ಹೋಗಲಾಡಿಸಬೇಕು
ದೇಶದ ಸಂಪತ್ತು, ಶಿಕ್ಷಣ ಹಂಚಿಕೆಯಾಗಬೇಕು‌
ಅಂಬೇಡ್ಕರ್ ಹೇಳಿದ್ದರು ಶಿಕ್ಷಣ ಬಹಳ ಮುಖ್ಯ
ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು ಅಂದ್ರೆ ಶಿಕ್ಷಣ ಮುಖ್ಯ ಎಂದು ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹೇಳಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ೨೪.೧ % ಎರಡು ಸಮುದಾಯಕ್ಕೆ ಮೀಸಲಾತಿ ನೀಡಿದ್ದೆ,
೨೦೧೩ ರಲ್ಲಿ ಈ ಬಿಲ್ ನ ಜಾರಿಗೆ ತಂದೆ, ದೇಶದಲ್ಲೆ
ಈ ಬಿಲ್ ಜಾರಿಗೆ ತಂದ ಎರಡನೇ ರಾಜ್ಯ ನಮ್ಮದ್ದು , ಬಸವಣ್ಣನ ವಚನಗಳನ್ನ ೮೦೦ ವರ್ಷಗಳಿಂದ ಹೇಳ್ತಾನೇ ಬಂದಿದ್ದಾರೆ ವಚನಗಳು ಹೇಳ್ತಾರೆ ನಂತರ ಪಕ್ಕಕ್ಕೆ‌ ಬಂದು ನೀನು ಯಾವ ಜಾತಿ ಅಂತ ಕೇಳ್ತಾರೆ, ಮೇಲ್ ಜಾತಿನಾ, ಕೆಳ ಜಾತಿನಾ ಎಂದು ಕೇಳ್ತಾರೆ, ನಮ್ಮಲ್ಲಿ ಗುಲಾಮಗಿರಿ ಜಾತಿ ವ್ಯವಸ್ಥೆ ಇದೆ , ಗುಲಾಮಗಿರಿ ಮನಸ್ಥಿತಿಯನ್ನ ಮೊದಲು ಹೋಗಲಾಡಿಸಬೇಕು.

ಬೇರೇ ಜಾತಿಯವನು ಬಡವ ಆದ್ರೂ ಗೌರವದಿಂದ ಮಾತನಾಡಿಸುತ್ತಾರೆ. ಆದ್ರೆ ದಲಿತ ಶ್ರೀಮಂತನಾದ್ರೂ ಅವ್ರನ್ನ ಬೇರೆಯದ್ದೇ ರೀತಿ ಮಾತನಾಡಿಸುತ್ತಾರೆ ಎಂದು‌ ಅಭಿಪ್ರಾಯ ಪಟ್ಟರು.

2 ಲಕ್ಷ 86 ಸಾವಿರ ಕೋಟಿ ಈ ಭಾರಿಯ ರಾಜ್ಯ ಬಜೆಟ್ ಗಾತ್ರ.

ರಾಜ್ಯದ ಬಜೆಟ್ ಗಾತ್ರ ಜಾಸ್ತಿ ಆಯ್ತು‌ ಆದ್ರೆ ಎಸ್ ಸಿಪಿ ಟಿಎಸ್ ಪಿ ಬಜೆಟ್ ಗಾತ್ರ ಕಡಿಮೆಯಾಗುತ್ತಿದೆ,
ಕೇಂದ್ರ ಬಜೆಟ್ ಗಾತ್ರ 39 ಲಕ್ಷದ 50 ಸಾವಿರ ಕೋಟಿ
ಇದರಲ್ಲಿ ಎಸ್ ಸಿಪಿ, ಟಿಎಸ್ ಪಿ ಗೆ ೨ ಲಕ್ಷದ ೩೧ ಸಾವಿರ ಕೋಟಿ ಅಷ್ಟೆ ನೀಡಿರುವುದು,
ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಮಾಡಬೇಕು‌
ಕಾಯಿದೆಯಲ್ಲಿ 7D ಅನ್ನ ತೆಗೆಯಬೇಕೆಂದು ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.

Share