Published
5 months agoon
ಬೆಂಗಳೂರು: (ಸುವರ್ಣ ವಿಧಾನಸೌಧ) ಡಿಸೆಂಬರ್ ೧೪ (ಯು.ಎನ್.ಐ.) ಹಾಸನ- ಸೊಲ್ಲಾಪುರ ಸೂಪರ್ ಫಾಸ್ಟ್ ರೈಲು ವಿಳಂಬದಿಂದಾಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಾಗಿಲ್ಲ ಎಂದು ಹಾಸನ ಜಿಲ್ಲೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು.
ಅವರಿಂದು ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ರೈಲು ಬಹಳ ತಡವಾಗಿ ತಲುಪಿದ ಕಾರಣ ಇಂಜಿನಿರ್ ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳು ಸಕಾಲದಲ್ಲಿ ಪರೀಕ್ಷಾ ಕೊಠಡಿ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದರಿಂದ ಅವರಿಗೆ ಪರೀಕ್ಷೆ ಬರೆಯುವ ಅವಕಾಶ ನೀಡಿಲ್ಲ. ತಮ್ಮದಲ್ಲದ ತಪ್ಪಿಗೆ ಅವರು ಪರಿತಪಿಸುವಂತಾಗಿದೆ ಎಂದು ಸದನಕ್ಕೆ ವಿವರಿಸಿದರು.
ಈ ವಿಷಯಕ್ಕೆ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಅಜಯ್ ಸಿಂಗ್ ದನಿಗೂಡಿಸಿದರು. ೧೦ ಗಂಟೆಗೆ ರೈಲು ತಲುಪಬೇಕಿತ್ತು. ಆದರೆ ಬಹಳ ತಡವಾಗಿ ತಲುಪಿದೆ. ಅಭ್ಯರ್ಥಿಗಳು ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಅವರಿಗೆ ತೊಂದರೆಯಾಗುತ್ತದೆ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ ಅವರು ನಾನು ಹಾಗೂ ಸಿ ಸಿ ಪಾಟೀಲ್ ತಕ್ಷಣ ಸ್ಪಂದಿಸಿದ್ದೇವೆ. ಇದರ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಗೈರು ಆದವರಿಗೆ ಮತ್ತೊಂದು ಪರೀಕ್ಷೆ ಬರೆಯಲು ಅವಕಾಶ ನೀಡಲು ಸೂಚನೆ ನೀಡಲಾಗಿದೆ ಮಾಧ್ಯಾಹ್ನದವರೆಗೆ ಗೈರಾದರೆ ಅವರಿಗೆ ಮತ್ತೊಂದು ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದರು.
ಸಚಿವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ರೈಲು ವಿಳಂಬದಿಂದ ಮಧ್ಯಾಹ್ನದ ನಂತರವೂ ತಲುಪಲು ಸಾಧ್ಯವಾಗಿಲ್ಲ ಎಂದು ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸಚಿವರು ರೈಲು ತಡವಾದರೆ ಮಧ್ಯಾಹ್ನದ ನಂತರದ ಪರೀಕ್ಷೆಗೂ ಗೈರಾದರೆ ಮತ್ತೊಮ್ಮೆ ಅವಕಾಶ ಎಂದು ಭರವಸೆ ನೀಡಿದರು.
ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಪ್ರತಾಪ್ ರೆಡ್ಡಿ ನೇಮಕ
ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ
ಶಾಲಾ ಮಕ್ಕಳೊಂದಿಗೆ ಸಿಎಂ ಸಂವಾದ; ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಬೊಮ್ಮಾಯಿ
ಎಂಬಿಎ ಪದವೀಧರೆಯಾಗಿದ್ರೂ ಕೆಲಸ ಸಿಗದೆ ಉಡುಪಿಯ ಸಹನಾ ಸಾವು; ಡಿಕೆಶಿ ಸಂತಾಪ
ರಾಷ್ಟ್ರಗೀತೆ ಹಾಡೋದನ್ನು ಮುತಾಲಿಕ್ ಹೇಳಿ ಕೊಡಬೇಕಾ? – ಜಮೀರ್