Connect with us


      




ದೇಶ

ಕೃಷಿಕರ ಕಾಯುವಿಕೆಗೆ ಕಾಳಜಿ ತೋರಲಿಲ್ಲವೇಕೆ ? ನವಜೋತ್ ಸಿಧು ಪ್ರಶ್ನೆ

Kumara Raitha

Published

on

ಸಾಂದರ್ಭಿಕ ಚಿತ್ರ

ನವ ದೆಹಲಿ: ಜನೆವರಿ 07 (ಯು.ಎನ್.ಐ.) ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಉಲ್ಲಂಘನೆಯ ಬಗ್ಗೆ ಆರೋಪಗಳನ್ನು ಮಾಡುತ್ತಿರುವ  ಬಿಜೆಪಿಯನ್ನು ಗೇಲಿ ಮಾಡಿದ್ದಾರೆ.  ಕೇವಲ 15 ನಿಮಿಷಗಳ ಕಾಯುವಿಕೆಯಿಂದ ಅವರು “ತೊಂದರೆಗೊಂಡಿದ್ದಾರೆ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಕೃಷಿ ಕಾನೂನುಗಳನ್ನು ರದ್ದುಪಡಿಸುವ ಸಲುವಾಗಿ  ರೈತರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು. ಅದರ ಬಗ್ಗೆ ಏಕೆ ಕಾಳಜಿ ತೋರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

“ನಾನು ಪ್ರಧಾನ ಮಂತ್ರಿ ಸಾಹೇಬರನ್ನು ಕೇಳಲು ಬಯಸುತ್ತೇನೆ, ನಮ್ಮ ರೈತ ಸಹೋದರರು ದೆಹಲಿಯ ಗಡಿಯಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬೀಡು ಬಿಟ್ಟಿದ್ದರು.  ಅವರು ಒಂದೂವರೆ ವರ್ಷ ಅಲ್ಲಿಯೇ ಇದ್ದರು. ನಿಮ್ಮ ಮಾಧ್ಯಮಗಳು ಏನನ್ನೂ ಹೇಳಲಿಲ್ಲ” ಆದರೆ ನೀವು ನಿನ್ನೆ ನೀವು 15 ನಿಮಿಷಗಳ ಕಾಲ ಮಾತ್ರ ಕಾಯಬೇಕಾಯಿತು. ಏಕೆ ಈ ದ್ವಂದ್ವನೀತಿ ಎಂದು ಪ್ರಶ್ನಿಸಿದರು.

ಫಿರೋಜ್‌ಪುರದಲ್ಲಿ ಬಿಜೆಪಿ ರ್ಯಾಲಿ ಸುದ್ದಿ ಕೇಳಿದ ನಂತರ ರೈತರು ನಿನ್ನೆ ಪ್ರತಿಭಟನಾ ಸಭೆಯನ್ನು ಯೋಜಿಸಿದ್ದರು.ಹೆದ್ದಾರಿಯಲ್ಲೇ ಧರಣಿ ಕುಳಿತಿದ್ದರು.

ಪ್ರಧಾನಿಯವರ ಭದ್ರತೆಯಲ್ಲಿ “ತಥಾಕಥಿತ ಉಲ್ಲಂಘನೆ” ಕುರಿತು ಬಿಜೆಪಿಯು ಕ್ಷುಲ್ಲಕ ರಾಜಕೀಯ ನಾಟಕವನ್ನು ರೂಪಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಫಿರೋಜ್‌ಪುರದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಕಡಿಮೆ ಜನ ಭಾಗವಹಿಸಿದ್ದರಿಂದ ಪ್ರಧಾನಿ ತಮ್ಮ ರ್ಯಾಲಿಯನ್ನು ರದ್ದುಗೊಳಿಸಬೇಕಾಯಿತು ಎಂದು ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.

ರ್ಯಾಲಿಯಲ್ಲಿ ಜನರ ಬಹು ಕಡಿಮೆ ಹಾಜರಾತಿ ಕಾರಣ  ಎಲ್ಲರ ಗಮನವನ್ನು ಬೇರೆಡೆಗೆ ಸೆಳೆಯಲು ಭದ್ರತಾ ಕಾರಣಗಳನ್ನು ಪ್ರಸ್ತಾಪಿಸಲಾಗುತ್ತಿದೆ ಎಂದು  ಸಿದ್ದು ಆರೋಪಿಸಿದ್ದಾರೆ.

“ಪ್ರಧಾನಿಯು ಖಾಲಿ ಕುರ್ಚಿಗಳನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗಲಿಲ್ಲ. ಮಾಧ್ಯಮದ ಗಮನವನ್ನು ಆಪಾದಿತ ಭದ್ರತಾ ಬೆದರಿಕೆಯತ್ತ ತಿರುಗಿಸಲಾಗಿದೆ. 70000 ಕುರ್ಚಿಗಳ ಮೇಲೆ ಇದ್ದ 500 ಜನರನ್ನು ಉದ್ದೇಶಿಸಿ ಮಾತನಾಡುವುದರಿಂದ ಆಗುವ ಮುಜುಗರ ತಪ್ಪಿಸಿಕೊಳ್ಳಲು ಹೀಗೆಲ್ಲ ಮಾಡಲಾಗುತ್ತಿದೆ ಎಂದು ಅವರು  ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ,  ಬೆಂಗಾವಲು ಪಡೆ ನಿನ್ನೆ ಪಂಜಾಬ್‌ನ ಫಿರೋಜ್‌ಪುರದ ಫ್ಲೈಓವರ್‌ನಲ್ಲಿ ಸಿಲುಕಿಕೊಂಡಿದ್ದರು. ಪ್ರಧಾನಿ ಸಾಗುವ ಮಾರ್ಗದಲ್ಲಿನ ಹೆದ್ದಾರಿಯಲ್ಲಿ ರೈತರು ಧರಣಿ ಮಾಡಿದ್ದರು. ಇದರಿಂದ ಮೋದಿ ಅವರು ಭಾಗವಹಿಸಬೇಕಿದ್ದ ಬಟಿಂಡಾದಲ್ಲಿ ರಾಜಕೀಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡದೆ ಹಿಂತಿರುಗುವಂತ ಪರಿಸ್ಥಿತಿ ನಿರ್ಮಾಣವಾಯಿತು ಎಂಬುದನ್ನು ಸ್ಮರಿಸಬಹುದು.

Share