Connect with us


      
ದೇಶ

ಭೀಕರ ಅಪಘಾತ; ಆರು ಮಂದಿ ಮಹಿಳೆಯರ ದುರ್ಮರಣ, ಇಬ್ಬರಿಗೆ ಗಾಯ

Kumara Raitha

Published

on

ಅನಂತಪುರ/ ಆಂಧ್ರಪ್ರದೇಶ: ನವೆಂಬರ್ 05  (ಯುಎನ್ಐ): ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ರಿಕ್ಷಾವೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಶಂಕರಮ್ಮ (36), ನಾಗವೇಣಿ (32), ಚಿಟ್ಟೆಮ್ಮ (35), ಸುಬ್ಬಮ್ಮ (45), ಸಾವಿತ್ರ (40) ಮತ್ತು ಚೌಡಮ್ಮ (33) ಎಂದು ಗುರುತಿಸಲಾಗಿದೆ. ಐವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ. ಮೃತರೆಲ್ಲರೂ ಗರ್ಲದಿನ್ನೆ ಮಂಡಲದ ಕೊಪ್ಪಲಕೊಂಡ ಗ್ರಾಮದವರು ಎಂದು ತಿಳಿದು ಬಂದಿದೆ.

13 ಮಂದಿ ಕೃಷಿ ಕಾರ್ಮಿಕರು ಆಟೋರಿಕ್ಷಾದಲ್ಲಿ ಹತ್ತಿ ಹೊಲಕ್ಕೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ-44ರ ತಹಶೀಲ್ದಾರ್ ಕಚೇರಿಯ ಪಮಿಡಿ ಗ್ರಾಮದ ಬಳಿ ಡಿಕ್ಕಿ ಸಂಭವಿಸಿದೆ.

ತಾಡಿಪತ್ರಿ ಪೆÇಲೀಸ್ ಠಾಣೆಯಲ್ಲಿ ಪ್ರಕೆಣ ದಾಖಲಾಗಿದ್ದು, ಉಪಾಧೀಕ್ಷಕ ಚೈತನ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿ ಆಟೋ ರಿಕ್ಷಾವು ರಸ್ತೆ ನಿಯಮ ಉಲ್ಲಂಘಿಸಿರುವುದೇ ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು  ತಿಳಿಸಿದ್ದಾರೆ.

ಆಂಧ್ರಪ್ರದೇಶದ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಘಟನೆಯ ಬಗ್ಗೆ ದುಃಖ ಮತ್ತು ಆಘಾತ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ಇನ್ನು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೂಡ ಸಂತಾಪ ಸೂಚಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿದರು.

Share