Connect with us


      
ವಿದೇಶ

ಸಮಾಧಿ ಮಾಡುವ ಬದಲು ಶವ ಸುಟ್ಟಿದ್ದಕ್ಕೆ ಗಲಾಟೆ!

Iranna Anchatageri

Published

on

ಟೋಕಿಯೋ : ಜನೆವರಿ 05 (ಯು.ಎನ್.ಐ.) ಹೌದು.. ಇದು ವಿಚಿತ್ರವಾದ್ರೂ ಸತ್ಯ. ಪಾಕಿಸ್ತಾನದ ಲಾಹೋರ್ ಮೂಲದ ವ್ಯಕ್ತಿ ಜಪಾನಿ ಮಹಿಳೆಯನ್ನು ವಿವಾಹವಾಗಿದ್ದ. ಪಾಕ್ ಮಾಧ್ಯಮಗಳ ವರದಿ ಪ್ರಕಾರ ಈತನ ಹೆಸರು ರಶೀದ್ ಮೆಹಮೂದ್ ಖಾನ್. ಆದರೆ, ಈತ ಅನಾರೋಗ್ಯದಿಂದಾಗಿ ಜಪಾನ್ ನಲ್ಲಿ ನಿಧನನಾಗಿದ್ದಾನೆ.

ಈತನ ಜಪಾನಿನ ಪತ್ನಿ, ಯಾವುದೇ ಮುಸ್ಲಿಂ ಆಚಾರ-ವಿಚಾರ ಹಾಗೂ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ರಶೀದ್ ಮೆಹಮೂದ್ ಖಾನ್ ಅವರ ಶವವನ್ನು ಹೂಳುವ ಬದಲು ಸುಟ್ಟಿದ್ದಾರೆ. ಇದಾದ ಕೆಲವು ದಿನಗಳ ಬಳಿಕ, ರಶೀದ್ ಮೆಹಮೂದ್ ಸ್ನೇಹಿತ ಮಲಿಕ್ ನೂರ್ ಅವಾನ್ ಎಂಬಾತ ಜಪಾನ್ ಆಸ್ಪತ್ರೆಗೆ ಸಂಪರ್ಕಿಸಿ ತನ್ನ ಗೆಳೆಯನ ಬಗ್ಗೆ ವಿಚಾರಿಸಿದ್ದಾನೆ. ಈ ವೇಳೆ ಅಲ್ಲಿನ ಆಸ್ಪತ್ರೆ ಸಿಬ್ಬಂದಿ, ರಶೀದ್ ಮೆಹಮೂದ್ ಅವರ ಅಂತ್ಯ ಸಂಸ್ಕಾರವನ್ನು ಜಪಾನ್ ಸಂಪ್ರದಾಯದಂತೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಯಾವಾಗ ಸ್ನೇಹಿತನ ಮೂಲಕ ಜಪಾನ್ ಆಸ್ಪತ್ರೆಯಿಂದ ಹೊರಬಿತ್ತೋ.. ಅಲ್ಲಿಂದ ಪಾಕಿಸ್ತಾನದಲ್ಲಿ ಗಲಾಟೆ ಆರಂಭವಾಗಿದೆ.

ಜಪಾನ್‌ನಲ್ಲಿ ಸ್ಥಳಾವಕಾಶದ ಕೊರತೆ

ಇಸ್ಲಾಮಿಕ್ ಸಂಪ್ರದಾಯದಲ್ಲಿ, ವ್ಯಕ್ತಿಯ ಮರಣದ ನಂತರ ಅವನ ದೇಹವನ್ನು ಸಮಾಧಿ ಮಾಡಲಾಗುತ್ತದೆ. ಆದರೆ, ಜಪಾನೀ ಸಂಪ್ರದಾಯದಲ್ಲಿ ವ್ಯಕ್ತಿಯ ಮರಣದ ನಂತರ, ಅವನ ದೇಹವನ್ನು ಸುಡಲಾಗುತ್ತದೆ. ಇದಲ್ಲದೆ, ಜಪಾನ್‌ನಲ್ಲಿ ಸ್ಥಳಾವಕಾಶದ ಕೊರತೆಯಿದೆ. ಇದರಿಂದಾಗಿ ಮೃತ ದೇಹಗಳನ್ನು ಸುಡುವ ಮೂಲಕ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಇದರಿಂದ ಅಲ್ಲಿ ನೆಲೆಸಿರುವ ಮುಸ್ಲಿಂ ಸಮುದಾಯ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

6 ತಿಂಗಳ ಅವಧಿಯಲ್ಲಿ ಪಾಕಿಸ್ತಾನಿಯೊಬ್ಬರ ಶವವನ್ನು ಹೂಳುವ ಬದಲು ಸುಟ್ಟು ಹಾಕಿರುವ ಎರಡನೇ ಘಟನೆ ಇದಾಗಿದೆ. ಈ ಸುದ್ದಿ ಮುನ್ನೆಲೆಗೆ ಬಂದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ವಿವಾದ ಶುರುವಾಗಿದೆ. ಈ ವಿಷಯವಾಗಿ ಜಪಾನ್ ಸರ್ಕಾರದೊಂದಿಗೆ ಯಾವಾಗ ಚರ್ಚೆ ಮಾಡುತ್ತಿರಿ ಎಂದು ಪಾಕಿಸ್ತಾನಿಗಳು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಗಲಾಟೆ ಮಾಡುತ್ತಿದ್ದಾರೆ.

Share