Published
5 months agoon
ಬೆಳಗಾವಿ: (ಸುವರ್ಣ ವಿಧಾಮಸೌಧ) ಡಿಸೆಂಬರ್ ೧೫ (ಯು.ಎನ್.ಐ.) ಬಿಜೆಪಿ ತರಲು ಹೊರಟಿರುವ ವಿಧೇಯಕ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಉಭಯ ಸದನಗಳ ಒಳಗೆ ಮತ್ತು ಹೊರಗೆ ಪ್ರಬಲವಾದ ಹೋರಾಟ ಮಾಡುವುದಾಗಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ, ಶಿವಕುಮಾರ್ ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಆಯೋಜಿತವಾಗಿದ್ದ ಕಾಂಗ್ರೆಸ್ ಶಾಸಕಾಂಗ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿಯೊಂದು ವಿಷಯಗಳನ್ನು ಹಂತತಂತವಾಗಿ ತೆಗೆದುಕೊಳ್ಳುತ್ತೇವೆ. ಮತಾಂತರ ನಿಷೇಧ ಕಾನೂನು ಬಗ್ಗೆ ಕೊನೆಯಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.
ಮತಾಂತರ ಕುರಿತಂತೆ ಈಗಾಗಲೇ ಕಾನೂನು ಇದೆ. ಇರುವ ಕಾನೂನನ್ನು ಪ್ರಯೋಗ ಮಾಡಬೇಕು. ಅದನ್ನು ಬಿಟ್ಟು ಹೊಸದಾಗಿ ಮತಾಂತರ ನಿಷೇಧ ಕಾಯಿದೆ ತರಲು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹೊರಟಿರುವುದರ ಹಿಂದೆ ಚುನಾವಣಾ ಉದ್ದೇಶವಿದೆ. ರಾಜಕೀಯ ದುರುದ್ದೇಶದಿಂದ ಈ ವಿಧೇಯಕವನ್ನು ತರುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ ಎಂದು ಅವರು ದೂರಿದರು.
ಇದುವರೆಗೂ ಮತಾಂತರ ನಿಷೇಧ ವಿಧೇಯಕಕ್ಕೆ ಸಂಬಂಧಿಸಿದ ಕರಡು ಪ್ರತಿ ಲಭ್ಯವಾಗಿಲ್ಲ. ಸಚಿವ ಸಂಪುಟದ ಮುಂದೆಯೂ ಚರ್ಚೆಯಾಗಿಲ್ಲ. ಸಾಕಷ್ಟು ಸಚಿವರಿಗೆ ಈ ವಿಧೇಯಕದ ಬಗ್ಗೆ ವಿರೋಧವಿದೆ ಎನ್ನಲಾಗಿದೆ. ಇದು ಸಂವಿಧಾನ ಬಾಹಿರ ಎನ್ನುವುದು ಅವರಿಗೆ ಅರಿವಾಗಿದೆ. ಇಷ್ಟೆಲ್ಲ ಇದ್ದರೂ ಬಿಜೆಪಿ ವಿಧೇಯಕ ಮಂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಡಿ,ಕೆ. ಶಿವಕುಮಾರ್ ಹೇಳಿದರು.
ಮತಾಂತರ ನಿಷೇಧ ಕಾಯಿದೆ ತರಲು ಹೊರಟಿರುವುದರಿಂದ ರಾಜ್ಯದ ರಾಜಸ್ವದ ಮೇಲೆ ಗಂಭೀರ ದುಷ್ಪರಿಣಾಮಗಳಿವೆ. ಇಡೀ ರಾಷ್ಟ್ರದಲ್ಲಿಯೇ ಕರ್ನಾಟಕ ಅತೋಹೆಚ್ಚು ರಾಜಸ್ವ ಗಳಿಸುವ ರಾಜ್ಯವಾಗಿದೆ. ಇಂಥ ಹೆಗ್ಗಳಿಕೆಗೆ ಉದ್ದೇಶಿತ ವಿಧೇಯಕದಿಂದ ಹಿನ್ನಡೆಯಾಗಲಿದೆ. ಬಂಡವಾಳ ಹಿಂತೆಗೆತ, ಬಂಡವಾಳ ಹೂಡಿಕೆಗೆ ಹಿಂಜರಿತ ಉಂಟಾಗಬಹುದು ಎಂದು ಅವರು ಎಚ್ಚರಿಸಿದರು.
ಜೈನ, ಬೌದ್ಧ, ಕ್ರೈಸ್ತ, ಸಿಖ್ ಹೀಗೆ ಹಲವಾರು ಧರ್ಮಗಳಿವೆ. ಯಾವುದೇ ಒಂದು ಧರ್ಮವನ್ನು ನಿರ್ದಿಷ್ಟ ಗುರಿಯಾಗಿಸಿಕೊಂಡು ವಿಧೇಯಕ ತರುವುದು ಸೂಕ್ತವಲ್ಲ ಎಂದ ಅವರು ಕಾಂಗ್ರೆಸ್ ಈ ವಿಧೇಯಕವನ್ನು ಬಲವಾಗಿ ವಿರೋಧಿಸುತ್ತದೆ ಎಂದು ಪುನರುಚ್ಚರಿಸಿದರು.
ಕೊನೆಗೂ ಸಿಕ್ತು ಜಾಮೀನು.. 2 ವರ್ಷದ ಬಳಿಕ ಜೈಲಿಂದ ಹೊರಬಂದ ಅಜಂಖಾನ್
ಸುನೀಲ್ ಜಖರ್ ಬಿಜೆಪಿಗೆ ಸೇರ್ಪಡೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಸಾಮೂಹಿಕ ನಾಯಕತ್ವ ಇಲ್ಲದೇ ಕಾಂಗ್ರೆಸ್ ಗೆಲ್ಲುವುದು ಸಾಧ್ಯವೇ ?
ಶರದ್ ಪವಾರ್ ವಿರುದ್ಧ ಪೋಸ್ಟ್; ಸಿನಿಮಾ ನಟಿಗೆ ನ್ಯಾಯಾಂಗ ಬಂಧನ
ಒಂದೇ ದಿನ ಕಾಂಗ್ರೆಸ್ ಗೆ ಡಬಲ್ ಶಾಕ್! ಶಾಸಕ ಸ್ಥಾನಕ್ಕೆ ರಾಜಸ್ತಾನ ಸಿಎಂ ಆಪ್ತ ರಾಜೀನಾಮೆ
ರಾಜೀವ್ ಗಾಂಧಿ ಹತ್ಯೆ ಕೇಸ್ ಅಪರಾಧಿಯ ಬಿಡುಗಡೆ ‘ನೋವು ಮತ್ತು ನಿರಾಶದಾಯಕ’: ಕಾಂಗ್ರೆಸ್