Published
6 months agoon
By
UNI Kannadaಚೆನ್ನೈ, ಜ 11(ಯುಎನ್ ಐ) ಮಾನಸಿಕವಾಗಿ ನಾನು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೆ.. ಆದರೆ, ಈಗ ಅವುಗಳಿಂದ ಹೊರಬರಲು ಸಾಧ್ಯವಾಗಿದೆ ಈ ವಿಚಾರದಲ್ಲಿ ಹಲವರು ನನಗೆ ಸಹಾಯ ಮಾಡಿದ್ದಾರೆ’ ಎಂದು ನಟಿ ಸಮಂತಾ ಹೇಳಿದ್ದಾರೆ.
ಮಾನಸಿಕ ಆರೋಗ್ಯ ಕುರಿತ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಮಂತಾ, ಈ ಸಂದರ್ಭದಲ್ಲಿ “ನಾವು ಒತ್ತಡದ ಜಗತ್ತಿನಲ್ಲಿ ಜೀವಿಸಿದ್ದೇವೆ. ಸಾಮಾಜಿಕ ಮಾಧ್ಯಮಗಳು ಸೇರಿದಂತೆ ಹೆಚ್ಚಿನ ಮಂದಿಯ ಗಮನ ನಮ್ಮತ್ತ ಕೇಂದ್ರೀಕರಿಸಿದೆ
ನಮ್ಮ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿರುವುದರಿಂದ ನಮ್ಮ ಆತಂಕ, ದೌರ್ಬಲ್ಯ, ಸಂಕಟಗಳ ಬಗ್ಗೆ ಮಾತನಾಡಲು ಮುಜುಗರವಾಗುತ್ತದೆ. ಈ ದಿನಗಳಲ್ಲಿ ಪರಿಪೂರ್ಣವಾಗಿ ಬದುಕುವುದು ತುಂಬಾ ಕಷ್ಟದ ಕೆಲಸವಾಗಿದೆ. ನನ್ನನ್ನು ನಂಬಿ… ಯಾರ ಜೀವನವೂ ಪರಿಪೂರ್ಣವಲ್ಲ. ಕೇವಲ ಗ್ಲಾಮರ್ ಬಗ್ಗೆ ಅಲ್ಲ.. ನನ್ನಂತಹವರು ಜೀವನದಲ್ಲಿ ಎದುರಾಗುವ ಸಂಕಟ, ಮುಜುಗರದ ಸನ್ನಿವೇಶಗಳ ಬಗ್ಗೆ ಮಾತನಾಡಿದರೆ ಜನ ಒಪ್ಪುತ್ತಾರೆ ಎಂದು ನನಗನಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಿಯೊಬ್ಬರ ಜೀವನದಲ್ಲೂ ಏರಿಳಿತಗಳಿರುತ್ತವೆ. ನಾನೂ ಮಾನಸಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಸ್ನೇಹಿತರು, ಸಲಹೆಗಾರರು, ಹಿತೈಷಿಗಳ ಸಲಹೆಗಳಿಂದ ಅವುಗಳಿಂದ ಹೊರಬರಲು ಸಾಧ್ಯವಾಯಿತು. ಅಲ್ಲದೆ, ಮುಂದೆ ನನ್ನ ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆ ಎದುರಿಸುವಷ್ಟು ಶಕ್ತಿಶಾಲಿಯಾಗಿದ್ದೇನೆ. ಏಕೆಂದರೆ ನನ್ನ ಸ್ನೇಹಿತರು ಹಿತೈಷಿಗಳು ನನಗೆ ಸಹಾಯ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ನಾಚಿಕೆಪಡುವುದರ ಬದಲು ನಮ್ಮ ಮಾನಸಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಿನಿ ಜರ್ನಿಗೆ ಇಂದಿಗೆ 30 ವರ್ಷ!
ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್, ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ…ಮುಂದಿನ ಚಿತ್ರಕ್ಕೆ ನಾಯಕಿಯೇ?
ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ಬಿಡುಗಡೆ
ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ಭೇಟಿ
‘777 ಚಾರ್ಲಿ’ ವೀಕ್ಷಿಸಿದ ರಜಿನಿಕಾಂತ್! ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ!
ಮಲಯಾಳಂ ನಟ ವಿಜಯ್ ಬಾಬುಗೆ ನಿರೀಕ್ಷಣಾ ಜಾಮೀನು ಮಂಜೂರು