Connect with us


      




ದೇಶ

ಅಗ್ನಿ ಅವಘಡ: 5 ಲಕ್ಷ ರೂ. ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ

Vanitha Jain

Published

on

ಹೈದರಾಬಾದ್: ಮಾರ್ಚ್ 23 (ಯು.ಎನ್‌.ಐ.) ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಬುಧವಾರ ಮುಂಜಾನೆ ಭೋಯಿಗುಡಾದ ಸ್ಕ್ರ್ಯಾಪ್ ಗೋಡೌನ್ ನಲ್ಲಿ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ರಾವ್ ಅಗ್ನಿ ಅವಘಡದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಬೆಂಕಿಯಲ್ಲಿ ಮೃತಪಟ್ಟವರು ಬಿಹಾರದ ಕಾರ್ಮಿಕರು ಎಂದು ತಿಳಿದು ಬಂದಿದ್ದು, ಸಂತಾಪ ವ್ಯಕ್ತಪಡಿಸಿದರು.

ಅಗ್ನಿ ಅವಘಡದಲ್ಲಿ ಮೃತಪಟ್ಟ ಬಿಹಾರದ ವಲಸೆ ಕಾರ್ಮಿಕರ ಮೃತದೇಹಗಳನ್ನು ಅವರ ಸ್ವಗ್ರಾಮಗಳಿಗೆ ವಾಪಸ್ ಕಳುಹಿಸಲು ವ್ಯವಸ್ಥೆ ಮಾಡುವಂತೆ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು.

Share