Connect with us


      




ದೇಶ

ಮಕ್ಕಳ ಆಸ್ಪತ್ರೆಯ ಸಂಕೀರ್ಣದಲ್ಲಿ ಭಾರೀ ಬೆಂಕಿ; 10 ಮಕ್ಕಳು ಸೇರಿದಂತೆ 70 ಜನರ ರಕ್ಷಣೆ

Lakshmi Vijaya

Published

on

ಅಹಮದಾಬಾದ್: ಜೂನ್ 25 (ಯು.ಎನ್.ಐ.) ಅಹಮದಾಬಾದ್‌ನ ಮಕ್ಕಳ ಆಸ್ಪತ್ರೆಯ ಸಂಕೀರ್ಣದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ನಾಲ್ಕು ಅಂತಸ್ತಿನ ಸಂಕೀರ್ಣದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ನಗರದ ಪರಿಮಳ್ ಗಾರ್ಡನ್ ಬಳಿಯ ದೇವ್ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿದೆ.

10 ಮಕ್ಕಳು ಸೇರಿದಂತೆ 50 ಕ್ಕೂ ಹೆಚ್ಚು ಜನರನ್ನು ಸಂಕೀರ್ಣದಿಂದ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದ್ದಾರೆ. ಪ್ರಾಥಮಿಕವಾಗಿ ಕಟ್ಟಡದ ಮೂರನೇ ಮಹಡಿಯಲ್ಲಿರುವ ಲೆಕ್ಕಪರಿಶೋಧಕ ಸಂಸ್ಥೆಯ ಸರ್ವರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ .ಬೆಂಕಿ ನಂದಿಸಲು ಸುಮಾರು 27 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂಕೀರ್ಣವು ನೆಲ ಮಹಡಿಯಲ್ಲಿ ವಿವಿಧ ಮೊಬೈಲ್ ಫೋನ್ ಮಳಿಗೆಗಳನ್ನು ಹೊಂದಿದೆ.  ನಾಲ್ಕು ಅಂತಸ್ತಿನ ಸಂಕೀರ್ಣದಲ್ಲಿ ವಿವಿಧ ಮಹಡಿಗಳಲ್ಲಿ  ರೇಡಿಯಾಲಜಿ ಮತ್ತು ಇಮೇಜಿಂಗ್ ಕೇಂದ್ರಗಳು, ಕಣ್ಣಿನ ದೃಷ್ಟಿ ಲೇಸರ್ ಕೇಂದ್ರವನ್ನು ಹೊಂದಿದೆ.ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ (ಎನ್‌ಐಸಿಯು) ದಾಖಲಾದ ಮೂರು ಶಿಶುಗಳು ಮತ್ತು 10 ಮಕ್ಕಳು ಸೇರಿದಂತೆ 70 ಜನರನ್ನು ರಕ್ಷಿಸಲಾಗಿದೆ ಮತ್ತು ಕಟ್ಟಡದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ . ರೋಗಿಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Share