Connect with us


      




ವಿದೇಶ

ಶಾಪಿಂಗ್ ಮಾಲ್‍ನಲ್ಲಿ ಬೆಂಕಿ ಅವಘಡ; 300ಕ್ಕೂ ಹೆಚ್ಚು ಮಂದಿ ಸಿಲುಕಿರುವ ಸಾಧ್ಯತೆ

Vanitha Jain

Published

on

ಹಾಂಗ್‍ಕಾಂಗ್, ಡಿಸೆಂಬರ್ 15(ಯು.ಎನ್.ಐ) ಇಲ್ಲಿನ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಬುಧವಾರ ಬೆಂಕಿಯ ಅವಘಡ ಸಂಭವಿಸಿದ್ದು 39ನೇ ಮಹಡಿಯಲ್ಲಿ 300ಕ್ಕೂ ಹೆಚ್ಚು ಜನರು ಕಟ್ಟಡದ ಮೇಲ್ಛಾವಣಿಯ ಮೇಲೆ ಸಿಲುಕಿಕೊಂಡಿದ್ದಾರೆ ಮತ್ತು ಕನಿಷ್ಠ ಐವರು ಗಾಯಗೊಂಡಿದ್ದಾರೆ.

ಕಾಸ್‍ವೇ ಬೇ ಜಿಲ್ಲೆಯ ವಲ್ರ್ಡ್ ಟ್ರೇಡ್ ಸೆಂಟರ್, ಶಾಪಿಂಗ್ ಸೆಂಟರ್ ಮತ್ತು ಕಚೇರಿ ಕಟ್ಟಡಗಳ ಸಂಕೀರ್ಣದಿಂದ ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಕಿ ಆವರಿಸಿದೆ.

ಕಟ್ಟಡದ ವಿದ್ಯುತ್ ಸ್ವಿಚ್ ಕೋಣೆಯಲ್ಲಿ ಮಧ್ಯಾಹ್ನ 12:37ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಮೇಲ್ಛಾವಣಿಯ ಮೇಲೆ 350 ಜನರು ಸಿಲುಕಿರುವ ಸಾಧ್ಯತೆ ಇದೆ ಮತ್ತು ಇನ್ನೂ ಐದನೇ ಮಹಡಿಯಲ್ಲಿ 100 ಜನರಿರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಕಿಯ ಕೆನ್ನಾಲಿಗೆ ಪಸರಿಸುತ್ತಿದ್ದು ಅಗ್ನಿಶಾಮಕ ಸಿಬ್ಬಂದಿ ತುರ್ತು ಏಣಿಗಳನ್ನು ಬಳಸಿ ಹಲವಾರು ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕಾಸ್‍ವೇ ಕೊಲ್ಲಿಯಲ್ಲಿರುವ 38 ಅಂತಸ್ತಿನ ಕಟ್ಟಡದಿಂದ 150 ಜನರನ್ನು ಸ್ಥಳಾಂತರಿಸಲಾಗಿದೆ.

ಸ್ಥಳದಲ್ಲೇ ಎಂಟು ಆ್ಯಂಬುಲೆನ್ಸ್‍ಗಳು ನಿಯೋಜಿಸಲಾಗಿದ್ದು, 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಸ್ಥಿತಿಯ ಬಗ್ಗೆ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

Share