Connect with us


      
ದೇಶ

ಮೊದಲ ದಿನವೇ 37,84,212 ಮಕ್ಕಳಿಗೆ ಕರೊನಾ ವ್ಯಾಕ್ಸಿನೇಷನ್

Iranna Anchatageri

Published

on

ಹೊಸದಿಲ್ಲಿ, ಜನವರಿ 03 (ಯು.ಎನ್.ಐ.) ಭಾರತದಲ್ಲಿ ಕರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿರುವ ಮಧ್ಯೆ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಇಂದಿನಿಂದ ಭಾರತದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ. ಮೊದಲ ದಿನವೇ 37 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಯಿತು.

ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ ಸಂಜೆ 7 ಗಂಟೆಯವರೆಗೆ 37 ಲಕ್ಷ 84 ಸಾವಿರದ 212 ಮಕ್ಕಳಿಗೆ ಕರೋನಾ ಲಸಿಕೆ ನೀಡಲಾಗಿದೆ. ಇದೇ ವೇಳೆ ಲಸಿಕೆಗೆ ನೋಂದಣಿ ಮಾಡಿಕೊಂಡವರ ಸಂಖ್ಯೆ 50 ಲಕ್ಷ ದಾಟಿದೆ. ಇಂದು ಮಧ್ಯಾಹ್ನದವರೆಗೆ 13 ಲಕ್ಷ ಮಕ್ಕಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರೆ, 34 ಲಕ್ಷ ಮಕ್ಕಳು ನೋಂದಾಯಿಸಿಕೊಂಡಿದ್ದರು. ಸಂಜೆಯ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಿದ್ದು, ಲಸಿಕೆ ಹಾಕಿಸಿಕೊಂಡವರ ಸಂಖ್ಯೆ 37 ಲಕ್ಷಕ್ಕೂ ಅಧಿಕವಾದ್ರೆ  50 ಲಕ್ಷಕ್ಕೂ ಹೆಚ್ಚು ಮಕ್ಕಳು ಲಸಿಕೆಗೆ ನೋಂದಣಿ ಮಾಡಿಕೊಂಡಿದ್ದಾರೆ.

ದೆಹಲಿಯಲ್ಲಿ ಸಂಜೆ 6 ಗಂಟೆಯವರೆಗೆ 15-18 ವರ್ಷದ 20,998 ಮಕ್ಕಳಿಗೆ ಕರೋನಾ ಲಸಿಕೆ ನೀಡಲಾಗಿದೆ. ಇದಕ್ಕೂ ಮುನ್ನ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಲಸಿಕೆ ಅಭಿಯಾನದ ನಡುವೆ ದೆಹಲಿಯ ಆರ್‌ಎಸ್‌ಎಲ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಲಸಿಕೆ ಪಡೆಯಲು ಬಂದ ಮಕ್ಕಳನ್ನು ಭೇಟಿಯಾಗಿ ಲಸಿಕಾ ಅಭಿಯಾನದ ಬಗ್ಗೆಯೂ ಕೇಂದ್ರ ಸಚಿವರು ಮಾಹಿತಿ ಪಡೆದುಕೊಂಡರು.

Share