Connect with us


      
ಕ್ರೀಡೆ

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ: ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ವಾಡ್ ಗೆ ಅವಕಾಶ ಇಲ್ವಂತೆ ಯಾಕೆ?

Vanitha Jain

Published

on

ಸೌತಮ್ಟನ್: ಜುಲೈ 06 (ಯು.ಎನ್.ಐ.) ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಇಂಗ್ಲೆಂಡ್ ನ ಸೌತಮ್ಟನ್ ನಲ್ಲಿ ಗುರುವಾರ (ಜುಲೈ ೭) ಆರಂಭವಾಗಲಿದ್ದು, ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ವಾಡ್ ಅವರಿಗೆ ಭಾರತ ಪರ ಆರಂಭಿಕ ಬ್ಯಾಟಿಂಗ್ ಗೆ ಅವಕಾಶ ಸಿಗುವುದಿಲ್ಲ ಎಂದು ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.

ನಾಯಕ ರೋಹಿತ್ ಶರ್ಮಾ ಕೋವಿಡ್-19ನಿಂದ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಿರುವುದರಿಂದ ಆಟಗಾರರ ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ರುತುರಾಜ್ ಗಾಯಕ್ವಾಡ್ ಐರ್ಲೆಂಡ್ ವಿರುದ್ಧದ ಐಪಿಎಲ್ ಮತ್ತು ಟಿ20ಐಗಳ ಸಮಯದಲ್ಲಿ ತನ್ನ ಕೌಶಲ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದರೂ ಸ್ಥಾನ ಸಿಗುವುದು ಸಂದೇಹವಾಗಿದೆ.

ಇನ್ನು ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕೂಡ ಐರ್ಲೆಂಡ್ ಟಿ20ಐ ನಲ್ಲಿ ಸ್ಟ್ರೋಕ್ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದರು.

ರೋಹಿತ್ ಟಿ20ಐ ಗೆ ಹಿಂತಿರುಗಿದ್ದಾರೆ. ಈಗ ಯಾರು ಹೊರಗುಳಿಯುತ್ತಾರೆ? ರುತುರಾಜ್ ಅವರಿಗೆ ಮತ್ತೊಂದು ಅವಕಾಶ ಸಿಗುವುದಿಲ್ಲ ಆದರೆ ಸಂಜು ಅವರ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆಯೇ? ಹೂಡಾ ಬಗ್ಗೆ ಏನು? ನಾಳೆ ಭಾರತವು ಜೋಸ್ ಬಟ್ಲರ್ ಅವರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುತ್ತದೆ. ಕಾಯಲು ಸಾಧ್ಯವಿಲ್ಲ ಎಂದು ಆಕಾಶ್ ಚೋಪ್ರಾ ಕೂ ಮಾಡಿದ್ದಾರೆ.

ಮೊದಲ ಟಿ20ಐಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ ದೀಪ್ ಸಿಂಗ್, ಉಮ್ರಾನ್ ಮಲಿಕ್

ಎರಡನೇ ಮತ್ತು ಮೂರನೇ ಟಿ20ಐಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (WK), ರಿಷಬ್ ಪಂತ್ (WK), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್ ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಜಸ್ ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್.

Share