Connect with us


      




ವಿದೇಶ

ಮೊದಲ ಮಹಿಳಾ ಜಸ್ಟಿಸ್ ನೇಮಕಕ್ಕೆ ಪಾಕ್‌ನಲ್ಲಿ ವಿರೋಧ : ಕೋರ್ಟ್ ಬಂದ್ ಮಾಡುವ ಬೆದರಿಕೆ!

Iranna Anchatageri

Published

on

ಇಸ್ಲಾಮಾಬಾದ್ : ಜನವರಿ 04 (ಯು.ಎನ್.ಐ.) ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಮಹಿಳಾ ನ್ಯಾಯಾಧೀಶೆ ಜಸ್ಟಿಸ್ ಆಯೇಷಾ ಮಲಿಕ್ ಅವರ ನೇಮಕ ವಿಷಯವು ಕಗ್ಗಂಟಾಗಿದೆ.

ನ್ಯಾಯಮೂರ್ತಿ ಆಯೇಷಾ ಪಾಕ್ ಸುಪ್ರೀಂಕೋರ್ಟ್ ಗೆ ಬಡ್ತಿ ಪಡೆದರೆ ದೇಶದ ಎಲ್ಲಾ ನ್ಯಾಯಾಯಲಗಳು ಬಂದ್ ಆಗಲಿವೆ ಎಂದು ಪಾಕಿಸ್ತಾನ ಬಾರ್ ಕೌನ್ಸಿಲ್ ಬೆದರಿಕೆ ಹಾಕಿದೆ. ವಿಶೇಷವೆಂದರೆ ನ್ಯಾಯಮೂರ್ತಿ ಆಯೇಷಾ ಅವರ ವಿರೋಧಕ್ಕೆ ಬಾರ್ ಕೌನ್ಸಿಲ್ ಯಾವುದೇ ಪ್ರಮುಖ ಕಾರಣವನ್ನು ನೀಡುತ್ತಿಲ್ಲ. ಮಹಿಳೆಯರು ಹೈಕೋರ್ಟ್‌ಗೆ ನೇಮಕವಾದರೆ ಪರವಾಗಿಲ್ಲ, ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಾಧೀಶರನ್ನು ನೇಮಿಸಬಾರದು ಎಂಬುದು ಬಾರ್ ಕೌನ್ಸಿಲ್ ವಾದ ಆಗಿದೆ.

ಜನವರಿ 6 ರಂದು ಜಸ್ಟಿಸ್ ಆಯೇಷಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಬಗ್ಗೆ ಪಾಕಿಸ್ತಾನದ ನ್ಯಾಯಾಂಗ ಆಯೋಗದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ಕಳೆದ ಸಭೆಯಲ್ಲಿ 4 ಸದಸ್ಯರು ಮಹಿಳಾ ನೇಮಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೆ ಉಳಿದ ನಾಲ್ವರು ವಿರೋಧ ವ್ಯಕ್ತಪಡಿಸಿದ್ದರು.

ಬಾರ್ ಕೌನ್ಸಿಲ್‌ ಬೆದರಿಕೆ

ಪಾಕಿಸ್ತಾನ ಬಾರ್ ಕೌನ್ಸಿಲ್ ಸ್ಪಷ್ಟವಾಗಿ ಏನನ್ನೂ ಹೇಳಲು ಸಿದ್ಧವಾಗಿಲ್ಲ, ಆದರೆ ಪ್ರತಿಭಟನೆ ನಡೆಸುತ್ತಿದೆ. ನ್ಯಾಯಮೂರ್ತಿ ಆಯೇಷಾ ನೇಮಕಕ್ಕೆ ಒಪ್ಪಿಗೆ ದೊರೆತರೆ ದೇಶದ ಎಲ್ಲಾ ನ್ಯಾಯಾಲಯಗಳನ್ನು ಮುಚ್ಚುವುದಾಗಿ ಬಾರ್ ಕೌನ್ಸಿಲ್ ಹೇಳಿದೆ. ನ್ಯಾಯಮೂರ್ತಿ ಆಯೇಷಾ ಅವರು ಪ್ರಸ್ತುತ ಲಾಹೋರ್ ಹೈಕೋರ್ಟ್‌ನಲ್ಲಿ ನಿಯೋಜನೆಗೊಂಡಿದ್ದಾರೆ. ಆಯೇಷಾ ನೇಮಕದ ವಿಷಯ ಸೆಪ್ಟೆಂಬರ್‌ನಿಂದ ಬಾಕಿ ಉಳಿದಿದೆ. ನ್ಯಾಯಮೂರ್ತಿ ಆಯೇಷಾ ಅವರು ಹಿರಿತನದ ದೃಷ್ಟಿಯಿಂದಲೂ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಲು ಅರ್ಹರಲ್ಲ ಎಂದು ಬಾರ್ ಕೌನ್ಸಿಲ್ ಹೇಳುತ್ತಿದ್ದು, ಇದಕ್ಕಾಗಿ ನೇಮಕಾತಿ ನಿಯಮಗಳನ್ನು ಬದಲಾಯಿಸಬೇಕಿದೆ ಎಂದಿದೆ.

ಸಂವಿಧಾನ ತಿದ್ದುಪಡಿ ಅಗತ್ಯ

‘ದಿ ಡಾನ್’ ವರದಿಯ ಪ್ರಕಾರ, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಎರಡು ನಿಯಮಗಳಿವೆ. ಸಂಸತ್ತು ಇವುಗಳನ್ನು ಬದಲಾಯಿಸಬಹುದು. 175A ಅಡಿಯಲ್ಲಿ ನೇಮಕಾತಿಗಳನ್ನು ಮಾಡಲಾಗುತ್ತದೆ. ಆದರೆ 209 ಅಡಿಯಲ್ಲಿ ನ್ಯಾಯಾಧೀಶರನ್ನು ತೆಗೆದುಹಾಕಬಹುದು. ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಗುಲ್ಜಾರ್ ಅಹ್ಮದ್ ಅವರು ನಿವೃತ್ತಿ ಹೊಂದುವಾಗ ಅವರು ನ್ಯಾಯಾಧೀಶರನ್ನು ಹೇಗೆ ನೇಮಿಸಬಹುದು ಎಂದು ಬಾರ್ ಕೌನ್ಸಿಲ್ ಪ್ರಶ್ನೆ ಮಾಡುತ್ತಿದೆ.

Share