Connect with us


      
ವಿದೇಶ

ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಕೆನಡಾದಲ್ಲಿ ಸಾವು

Iranna Anchatageri

Published

on

ಟೊರೊಂಟೊ: ಮಾರ್ಚ್ 14 (ಯು.ಎನ್.ಐ.) ಕೆನಡಾದ ಟೊರೊಂಟೊದಲ್ಲಿ ಮಾರ್ಚ್ 13ರ ಶನಿವಾರದಂದು ಐವರು ಭಾರತೀಯ ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಸುದ್ದಿ ಬಂದಿದೆ. ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಈ ಮಾಹಿತಿ ನೀಡಿದ್ದಾರೆ. ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ತಂಡವು ಸಹಾಯಕ್ಕಾಗಿ ಸಂತ್ರಸ್ತರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ ಎಂದು ಅವರು ಹೇಳಿದ್ದಾರೆ.

ಒಂಟಾರಿಯೊ ಪ್ರಾಂತೀಯ ಪೊಲೀಸ್‌ನ ಕ್ವಿಂಟೆ ವೆಸ್ಟ್ ಡಿಟಾಚ್‌ಮೆಂಟ್ ಪ್ರಕಾರ ಎಲ್ಲಾ ವಿದ್ಯಾರ್ಥಿಗಳು ವ್ಯಾನ್‌ನಲ್ಲಿದ್ದರು. ಮುಂಜಾನೆ 3:45 ರ ಸುಮಾರಿಗೆ ಟ್ರ್ಯಾಕ್ಟರ್-ಟ್ರೇಲರ್ ಅವರ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ವ್ಯಾನ್‌ನಲ್ಲಿದ್ದ ಐವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳನ್ನು 24 ವರ್ಷದ ಹರ್‌ಪ್ರೀತ್ ಸಿಂಗ್, 21 ವರ್ಷದ ಜಸ್ಪಿಂದರ್ ಸಿಂಗ್, 22 ವರ್ಷದ ಕರಣ್‌ಪಾಲ್ ಸಿಂಗ್, 23 ವರ್ಷದ ಮೋಹಿತ್ ಚೌಹಾಣ್ ಮತ್ತು 23 ವರ್ಷದ ಪವನ್ ಎಂದು ಗುರುತಿಸಲಾಗಿದೆ. ಎಲ್ಲಾ ಐವರು ಮಾಂಟ್ರಿಯಲ್ ಮತ್ತು ಗ್ರೇಟರ್ ಟೊರೊಂಟೊ ಪ್ರದೇಶದಲ್ಲಿ ಅಧ್ಯಯನ ಮಾಡುತ್ತಿದ್ದರು. ವ್ಯಾನ್‌ನಲ್ಲಿದ್ದ ಇತರ ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಾಕ್ಟರ್ ಟ್ರೈಲರ್ ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Share