Connect with us


      
ದೇಶ

ಯೋಗಿ ಆದಿತ್ಯನಾಥ್ ನೀತಿಗಳಿಂದ ಪ್ರೇರಿಪಿತರಾದ ಐವರು ಅಕ್ರಮ ಮದ್ಯ ತಯಾರಿಸದಿರಲು ನಿರ್ಧಾರ

Vanitha Jain

Published

on

ಶಹಜಹಾನ್ ಪುರ: ಏಪ್ರಿಲ್ 23 (ಯು.ಎನ್.ಐ.) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಪ್ರೇರಿತರಾಗಿ ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಕೊಂಡಿದ್ದ ಐವರು ಶಹಜಹಾನ್ ಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರ ಸಿಂಗ್, ರೋಷನ್ ಸಿಂಗ್, ದೇಶರಾಜ್ ಸಿಂಗ್, ಚಮನ್ ಸಿಂಗ್ ಮತ್ತು ಗುರ್ಮೀತ್ ಎಂದು ಗುರುತಿಸಲಾದ ಐವರು ಭವಿಷ್ಯದಲ್ಲಿ ಅಕ್ರಮ ಮದ್ಯದ ವ್ಯವಹಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡು ನಂತರ ಅವರನ್ನು ಬಿಡಲಾಯಿತು ಎಂದು ಪೊಲೀಸರು ಹೇಳಿದರು.

“ನಾನು ದೇಶೀಯ ಮದ್ಯವನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಕೆಲಸವನ್ನು ಮಾಡುತ್ತೇನೆ, ಆದರೆ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಪ್ರಭಾವಿತನಾಗಿ ನಾನು ಈ ಕೆಲಸವನ್ನು ತ್ಯಜಿಸುತ್ತೇನೆ. ನಾನು ಎಂದಿಗೂ ಅಕ್ರಮ ಮದ್ಯವನ್ನು ಮಾಡುವುದಿಲ್ಲ, ಅದಕ್ಕಾಗಿಯೇ ನಾನು ಶರಣಾಗಲು ಬಂದಿದ್ದೇವೆ ಎಂದು ಪೋಸ್ಟರ್ ಹಿಡಿದು ಶುಕ್ರವಾರ ಸಂಜೆ ಖುತಾರ್ ಪೊಲೀಸ್ ಠಾಣೆಗೆ ತಲುಪಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Share