Connect with us


      
ಕರ್ನಾಟಕ

ಪುಷ್ಪೋದ್ಯಮ; ಎದುರಾದ ಸಂಕಷ್ಟ: ಯು.ಎನ್.ಐ. ವಿಶೇಷ ವರದಿ

Kumara Raitha

Published

on

ಬೆಂಗಳೂರು: ಜನೆವರಿ 05 (ಯು.ಎನ್.ಐ.) ಕಳೆದ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನಕ್ಕೆ ಹಾಗೂ ಇತರೆ ಸಮಾರಂಭಗಳ ಅಲಂಕಾರಕ್ಕಾಗಿ ಬಹು ಬೇಡಿಕೆಯನ್ನು ಹೊಂದಿದ್ದ ಗುಲಾಬಿ ಸೇರಿದಂತೆ ಡಚ್ ಹೂವುಗಳ ವ್ಯಾಪಾರ ವಹಿವಾಟಿಗೆ ಧಕ್ಕೆ ಉಂಟಾಗುವ ತೀವ್ರ ಆತಂಕ ಹೂ ಬೆಳೆಗಾರರಿಗೆ ಎದುರಾಗಿದೆ.
ಫೆಬ್ರವರಿ 14ರಂದು ಪ್ರೇಮಿಗಳ ದಿನ. ಆ ದಿನಕ್ಕಾಗಿ ಕರ್ನಾಟಕ ಹೂವಿಗೆ ಒಂದು ತಿಂಗಳು ಮೊದಲೇ ಬೇಡಿಕೆ ಆರಂಭವಾಗುತ್ತದೆ. ಅದರಲ್ಲೂ ಬೆಂಗಳೂರಿನಿಂದ ಅತಿ ಹೆಚ್ಚು ಪ್ರಮಾಣದ ಡಚ್ ಗುಲಾಬಿಗೆ ಯೂರೋಪ್, ಗಲ್ಫ್ ರಾಷ್ಟ್ರಗಳು, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ನಾನಾ ರಾಷ್ಟ್ರಗಳಲ್ಲಿ ವಿಶೇಷ ಬೇಡಿಕೆಯಿರುತ್ತದೆ. ಹೀಗಾಗಿ, ಪ್ರೇಮಿಗಳ ದಿನಕ್ಕೆಂದು ತುಂಬಾ ನಿರೀಕ್ಷೆಯನ್ನಿಟ್ಟುಕೊಂಡು ರೈತರು ಪಾಲಿಹೌಸ್‍ಗಳಲ್ಲಿ ಡಚ್ ಹೂವು ಬೆಳೆದಿದ್ದಾರೆ. ಉತ್ತಮ ಮಳೆಯಿಂದಾಗಿ ಬೆಳೆಯೂ ಸಮೃದ್ಧವಾಗಿ ಬಂದಿದೆ. ಆದರೆ ಕೋವಿಡ್ ಒಮೈಕ್ರಾನ್ ಪ್ರಕರಣಗಳ ಹೆಚ್ಚಳದಿಂದ ಈ ಬಾರಿ ಹೂವು ವಹಿವಾಟಿನ ಮೇಲೆ ಯಾವ ಪರಿಣಾಮ ಬೀಳುವುದೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.
ಪಾಲಿಹೌಸ್‍ಗಳಲ್ಲಿ ಬೆಳೆದ ಗುಲಾಬಿ ಹಾಗೂ ಇತರೆ ಹೂವುಗಳಾದ ಜರ್ಬೆರಾ, ಕಾರ್ನೇಷನ್, ಜಿಪೆÇ್ಲಫಿಲಿಯಾ ಮತ್ತಿತರ ಹೂವುಗಳು ನಾನಾ ಸಮಾರಂಭಗಳಿಗೆ ಹಾಗೂ ಹೋಟೆಲ್‍ಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿನ ವೇದಿಕೆ ಅಲಂಕಾರಕ್ಕಾಗಿ ಬಳಕೆಯಾಗುತ್ತವೆ. ಆದರೆ, ಎರಡು ವರ್ಷಗಳಿಂದ ಆಗಾಗ್ಗೆ ಕೋವಿಡ್‍ನ ಅಬ್ಬರ ಮರುಕಳಿಸುತ್ತಿದ್ದು ಬೆಳೆಗಾರರಿಗೆ ಸಾಕಷ್ಟು ನಷ್ಟವಾಗುತ್ತಿತ್ತು. ಇದೀಗ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎನ್ನುವಷ್ಟರಲ್ಲಿ ಇದೀಗ ಮತ್ತೆ ಒಮೈಕ್ರಾನ್ ಹಾವಳಿ ಎದುರಾಗಿದೆ.
ಯಾವ್ಯಾವ ರಾಷ್ಟ್ರಗಳಿಗೆ ರಫ್ತು:
ದುಬೈ, ಮಲೇಷಿಯಾ, ಸಿಂಗಾಪುರ, ಆಸ್ಟ್ರೇಲಿಯಾಗಳಿಂದ ಈಗಾಗಲೇ ಬೇಡಿಕೆ ಬಂದಿದೆ. ನ್ಯೂಜಿಲೆಂಡ್, ಶ್ರೀಲಂಕಾ, ಈಜಿಪ್ಟ್, ಒಮನ್, ಫ್ರಾನ್ಸ್, ಇಂಡೋನೇಷ್ಯಾ, ನೆದರ್‍ಲ್ಯಾಂಡ್, ಜಪಾನ್ ಮತ್ತಿತರ ರಾಷ್ಟ್ರಗಳಿಗೂ ಗುಲಾಬಿ ರಫ್ತಾಗಲಿವೆ. ಜನವರಿ 20ರ ವೇಳೆಗೆ ಬೇಡಿಕೆಯ ಪೂರ್ಣ ಪ್ರಮಾಣದ ಮಾಹಿತಿ ದೊರೆಯಲಿದೆ. ಜ.25 ರಿಂದ ಫೆ.12ರವರೆಗೆ ರಫ್ತು ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಸೌತ್ ಇಂಡಿಯಾ ಫ್ಲೋರಿಕಲ್ಚರ್ ಅಸೋಸಿಯೇಷನ್‍ನ ಪದಾಧಿಕಾರಿಯೊಬ್ಬರು ಮಾಹಿತಿ ನೀಡಿದರು. ತಾಜ್‍ಮಹಲ್, ಗ್ರ್ಯಾಂಡ್ ಗಾಲಾ, ಫಸ್ಟ್ ರೆಡ್, ಫ್ಯಾಷನ್, ಬೋರ್ಡೋ ಇತ್ಯಾದಿ ಬಗೆಯ ಗುಲಾಬಿಗಳು ರಫ್ತಾಗುತ್ತವೆ ಎಂದರು.
——

ಗ್ರೀನ್ ಹೌಸ್‍ನಲ್ಲಿ ಹೂವು ಬೆಳೆಯುವವರಿಗೆ ಸಾಮಾನ್ಯವಾಗಿ ಮದುವೆ ಸೀಸನ್‍ಗಳು ಹಾಗೂ ಪ್ರೇಮಿಗಳ ದಿನದಲ್ಲಿ ಮಾತ್ರವೇ ಆರ್ಥಿಕ ವಹಿವಾಟು ನಡೆಯುವುದು. ಕಳೆದ ವರ್ಷ ಜನವರಿ-ಫೆಬ್ರವರಿಯಲ್ಲಿ ಕೋವಿಡ್‍ನ ಅಬ್ಬರ ಅಷ್ಟಾಗಿ ಇರಲಿಲ್ಲ. ಹೀಗಾಗಿ, 30 ಲಕ್ಷ ಹೂವುಗಳನ್ನು ಹೊರರಾಷ್ಟ್ರಗಳಿಗೆ ರಫ್ತು ಮಾಡಲಾಗಿತ್ತು. ಇದೀಗ ಜನವರಿಯಲ್ಲೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ನಷ್ಟ ಹೊಂದಿದ ಹೂವು ಬೆಳೆಗಾರರಿಗೆ ಸರಕಾರ 25 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿತ್ತು. ಆದರೆ ರಾಜ್ಯದಲ್ಲಿ 7,500 ಹೆಕ್ಟೇರ್ ಗ್ರೀನ್ ಪ್ರದೇಶವಿದ್ದು, ಸುಮಾರು 6 ಸಾವಿರ ಮಂದಿ ಬೆಳೆಗಾರರಿದ್ದು, ಪರಿಹಾರ ಸಿಕ್ಕಿರುವುದು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ. ಒಂದು ಹೆಕ್ಟೇರ್ ನಿರ್ವಹಿಸಲು ತಿಂಗಳಿಗೆ ಒಂದು ಲಕ್ಷ ರೂ. ಖರ್ಚು ಬರುತ್ತದೆ. ಹೀಗಿರುವಾಗ, ಸರಕಾರ ನಮ್ಮನ್ನು ಕಡೆಗಣಿಸಿದರೆ ನಾವು ಬದುಕುವುದಾದರೂ ಹೇಗೇ? ಅಷ್ಟೇ ಅಲ್ಲ, ವಿದ್ಯುತ್ ಶುಲ್ಕದಲ್ಲಾದರೂ ವಿನಾಯಿತಿ ಕೊಡಿ ಎಂದು ಕೇಳಿದ್ದೆವು. ಅದಕ್ಕೂ ಸರಕಾರ ನೆರವಾಗಲಿಲ್ಲ ಎಂದು ಗ್ರೀನ್‍ಹೌಸ್ ಹೂವು ಬೆಳೆಗಾರ್ತಿ ರಾಗ ಶ್ರಾವಂತಿ ಬೇಸರ ವ್ಯಕ್ತಪಡಿಸಿದರು.

——-
ಪ್ರೇಮಿಗಳ ದಿನ ಹಾಗೂ ಅದರ ಸುತ್ತಮುತ್ತಲಿನ ದಿನಗಳಿಗಾಗಿ ಈ ಬಾರಿ 10 ಮಿನಿಯನ್ ಹೂವು (ಗುಲಾಬಿ, ಜರ್ಬೆರಾ, ಕಾರ್ನೇಷನ್, ಜಿಪೆÇ್ಲಫಿಲಿಯಾ ಮತ್ತಿತರ ಹೂವುಗಳು)ಗಳನ್ನು ಹೊರರಾಜ್ಯ ಹಾಗೂ ಹೊರ ರಾಷ್ಟ್ರಗಳಿಗೆ ರಫ್ತು ಮಾಡುವ ಗುರಿ ಹೊಂದಲಾಗಿತ್ತು. ಈ ಪೈಕಿ ಗುಲಾಬಿ ಹೂವುಗಳ ಪ್ರಮಾಣವೇ 50 ಲಕ್ಷದಷ್ಟಿದೆ. ಕಳೆದ ಎರಡು ವರ್ಷಗಳಿಂದ ಹೂವು ಬೆಳೆಗಾರರು ನಷ್ಟಕ್ಕೆ ಒಳಗಾಗಿ ಶೇ.30ರಷ್ಟು ರೈತರು ಹೂವಿನ ಬೆಳೆಯಿಂದ ವಿಮುಖರಾಗಿದ್ದಾರೆ. ಇದೀಗ ಶೇ.70ರಷ್ಟು ಬೆಳೆಗಾರರು ಹೂವು ಬೆಳೆದಿದ್ದಾರೆ. ಒಂದು ವೇಳೆ ಕೋವಿಡ್ ಹೆಚ್ಚಾಗಿ ಫೆಬ್ರವರಿ ವೇಳೆಗೆ ಲಾಕ್‍ಡೌನ್ ಆದರೆ ಹೂವು ಬೆಳೆಗಾರರು ಭಾರೀ ಸಂಕಷ್ಟಕ್ಕೆ ಸಿಲುಕುತ್ತಾರೆ.
-ಶ್ರೀಕಾಂತ್ ಬೊಲ್ಲೆಪಲ್ಲಿ, ನಿರ್ದೇಶಕರು, ಸೌತ್ ಇಂಡಿಯಾ ಫೆÇ್ಲೀರಿಕಲ್ಚರ್ ಅಸೋಸಿಯೇಷನ್

Share