Connect with us


      
ವಿದೇಶ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೈಲೆಟ್ ರಹಿತ ಹೆಲಿಕಾಪ್ಟರ್ ಹಾರಾಟ.

UNI Kannada

Published

on

ಅಮೇರಿಕ : ಫೆಬ್ರವರಿ 12 (ಯು.ಎನ್.ಐ.) ಪೈಲಟ್ ಇಲ್ಲದೆ ಹೆಲಿಕಾಪ್ಟರ್ ಹಾರಾಟ. ಇತಿಹಾಸದಲ್ಲಿ ಇದೇ ಮೊದಲು, ಅಮೇರಿಕಾದ ಕೆಂಟುಕಿಯಲ್ಲಿ, ಸೇನಾ ಅಧಿಕಾರಿಗಳು ಮಾನವರಹಿತ ಸ್ವಾಯತ್ತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಅನ್ನು ಪರೀಕ್ಷಿಸಿದರು. ಫೆಬ್ರವರಿ 5 ರಂದು ಸುಮಾರು ಅರ್ಧ ಗಂಟೆ ಪೈಲಟ್ ಇಲ್ಲದೆ ಹಾರಾಟ ನಡೆಸಿತ್ತು. ಸಿಮ್ಯುಲೇಟೆಡ್ ರೀತಿಯಲ್ಲಿ ಸ್ಥಾಪಿಸಲಾದ ಕಾಲ್ಪನಿಕ ನಗರದಲ್ಲಿನ ಕಟ್ಟಡಗಳ ದಾಟಿ ಮುಂದೆ ಸಾಗಿದೆ.

ಹೆಲಿಕಾಪ್ಟರ್ ಹಾರಾಟದ ನಂತರ ಮೊದಲೇ ನಿಯೋಜಿಸಿದ್ದ ಜಾಗದಲ್ಲಿ ಲ್ಯಾಂಡಿಂಗ್ ಆಗಿದೆ. ಗಂಟೆಗೆ 190 ಕಿಲೋಮೀಟರ್ ನಿಂದ 250 ಕಿಲೋಮೀಟರ್ ವೇಗದಲ್ಲಿ 4,000 ಅಡಿ ಎತ್ತರದಲ್ಲಿ ಹಾರಿತು. ಇದೇ ಹೆಲಿಕಾಪ್ಟರ್ ಕಳೆದ ಸೋಮವಾರ ಪರೀಕ್ಷಾರ್ಥ ಹಾರಾಟವನ್ನೂ ನಡೆಸಲಾಗಿತ್ತು. ಕಂಪ್ಯೂಟರ್-ಚಾಲಿತ ಹೆಲಿಕಾಪ್ಟರ್ ಅನ್ನು ಅಮೇರಿಕನ್ ಡಿಫೆನ್ಸ್ ರಿಸರ್ಚ್ ಪ್ರೋಗ್ರಾಂ ಅಲಿಯಾಸ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಈ ವೀಡಿಯೋ ಇದೀಗ ವಿಡಿಯೋ ವೈರಲ್ ಆಗಿದೆ.

Share