Connect with us


      




ಸಿನೆಮಾ

‘ಸೂರರೈ ಪೊಟ್ರು’ ಹಿಂದಿ ರಿಮೇಕ್ ಗೆ ಟೈಟಲ್ ಸಲಹೆ ನೀಡುವಂತೆ ಫ್ಯಾನ್ಸ್ ಗೆ ಅಕ್ಷಯ್ ಕುಮಾರ್ ಮನವಿ

Lakshmi Vijaya

Published

on

ಮುಂಬೈ:  ಏಪ್ರಿಲ್ 25 (ಯು.ಎನ್.ಐ.) ತಮಿಳಿನ ಸೂಪರ್‌ಹಿಟ್  ಸಿನಿಮಾ ಸೂರರೈ ಪೊಟ್ರುವಿನ ಹಿಂದಿ ರಿಮೇಕ್ ಕಳೆದ ತಿಂಗಳಿನಿಂದ ಭಾರೀ ಸುದ್ದಿಯಲ್ಲಿದೆ. ಹಲವು ದೊಡ್ಡ ಸ್ಟಾರ್ ಗಳ ಹೆಸರುಗಳು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗ್ತಿತ್ತು.  ಇದೀಗ ತಮಿಳಿನ ರಿಮೇಕ್ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.  ನಟಿ ರಾಧಿಕಾ ಮದನ್ ಜೊತೆಗೆ ರಿಮೇಕ್‌ನಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿರಲಿದ್ದಾರೆ ಎಂಬುದು ಖಚಿತವಾಗಿದೆ.

ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು  ನಟ ಅಕ್ಷಯ್ ಕುಮಾರ್ ಹೊಸ ವೀಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ. ಚಿತ್ರದ ನಿರ್ದೇಶಕಿ ಸುಧಾ ಕೊಂಗರ ಮತ್ತು ಅಕ್ಷಯ್ ಕುಮಾರ್ ಚಿತ್ರೀಕರಣ ಪ್ರಾರಂಭವಾಗುವ ಮೊದಲು ರಾಧಿಕಾ ಮದನ್ ಅವರು ಪೂಜೆಗೆ ತೆಂಗಿನಕಾಯಿ ಒಡೆಯುವುದನ್ನು ನೋಡುತ್ತಿರುವ ವಿಡಿಯೋ ಇದಾಗಿದೆ.

ಅಕ್ಷಯ್  ಕುಮಾರ್ ಅವರ ಪೋಸ್ಟ್ ಪರಿಶೀಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.instagram.com/reel/CcwxHgTp8V-/?utm_source=ig_embed&ig_rid=45486e54-878b-427f-92f7-b2ef95100869

ಚಿತ್ರದ ರಿಮೇಕ್ ಪ್ರಯಾಣದಲ್ಲಿ ನಟ ಅಕ್ಷಯ್ ಕುಮಾರ್ ತಮ್ಮ ಅಭಿಮಾನಿಗಳನ್ನೂ  ಜೊತೆಯಲ್ಲಿ ಸೇರಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಒಂದು ಟೈಟಲ್ ಸಲಹೆ ನೀಡುವಂತೆ ತಮ್ಮ ಸಾಮಾಜಿಕ ಮಾಧ್ಯಮದ ಅನುಯಾಯಿಗಳಿಗೆ ಮನವಿ ಮಾಡಿದ್ದಾರೆ .ಚಿತ್ರತಂಡ ಇಲ್ಲಿಯವರೆಗೆ ಯಾವುದೇ ಹೆಸರನ್ನು ಅಂತಿಮಗೊಳಿಸಿಲ್ಲ.

 ಮೂಲ ತಮಿಳು ಚಿತ್ರ ಡೆಕ್ಕನ್ ಏರ್ ಸಂಸ್ಥಾಪಕ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾ. ತಮಿಳು ಚಿತ್ರವನ್ನೂ ಸುಧಾ ಕೊಂಗರ ನಿರ್ದೇಶಿಸಿದ್ದು  ನಟ ಸೂರ್ಯ ಮುಖ್ಯ ಭೂಮಿಕೆಯಲ್ಲಿದ್ದರು.

Share