Connect with us


      
ದೇಶ

ಬಿಹಾರದ ಮಾಜಿ ಸಚಿವ ಸುಭಾಷ್ ಸಿಂಗ್ ನಿಧನ

Vanitha Jain

Published

on

ಪಾಟ್ನಾ: ಆಗಸ್ಟ್ 16 (ಯು.ಎನ್.ಐ.) ಈ ಹಿಂದೆ ಕಿಡ್ನಿ ಕಸಿಗೆ ಒಳಗಾಗಿದ್ದ ಬಿಹಾರದ ಮಾಜಿ ಸಚಿವ ಸುಭಾಷ್ ಸಿಂಗ್ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.

ಮೂಲಗಳ ಪ್ರಕಾರ, ಸುಭಾಷ್ ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಗೆ ದಾಖಲಾಗಿದ್ದರು.

ನಿತೀಶ್-ತೇಜಸ್ವಿ ಸರ್ಕಾರದ ಸಂಪುಟ ವಿಸ್ತರಣೆ ಮಂಗಳವಾರ, ಆಗಸ್ಟ್ 16 ರಂದು ಬೆಳಿಗ್ಗೆ 11:30 ಕ್ಕೆ ನಡೆಯಲಿದೆ ಎಂಬ ವರದಿಗಳ ನಡುವೆ ಅವರ ಸಾವಿನ ಸುದ್ದಿ ಬಂದಿದೆ. ಸಿಂಗ್ ಅವರ ನಿಧನದ ಸುದ್ದಿಗೆ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

Share