Connect with us


      
ದೇಶ

ಕಾಂಗ್ರೆಸ್ ಉಚ್ಛಾಟಿತ ನಾಯಕ ಕಿಶೋರ್ ಉಪಾಧ್ಯಾಯ ಬಿಜೆಪಿಗೆ ಸೇರ್ಪಡೆ

Vanitha Jain

Published

on

ಕಾಂಗ್ರೆಸ್ ಉಚ್ಛಾಟಿತ ನಾಯಕ ಕಿಶೋರ್ ಉಪಾಧ್ಯಾಯ ಬಿಜೆಪಿಗೆ ಸೇರ್ಪಡೆ

ಡೆಹ್ರಾಡೂನ್: ಜನೆವರಿ 27 (ಯು.ಎನ್.ಐ.) ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುನ್ನ, ಉಚ್ಛಾಟಿತ ರಾಜ್ಯ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ ಗುರುವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆ ಸೇರ್ಪಡೆಗೊಂಡಿದ್ದಾರೆ. ಉಪಾಧ್ಯಾಯ ಅವರು ಇಂದು ಬೆಳಗ್ಗೆ ಡೆಹ್ರಾಡೂನ್‌ನಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು.

ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ನ ನಾನು ಈಗ ಹೊಸತೇನಾದರೂ ಮಾಡುತ್ತೇನೆ, ಮಾತನಾಡುವ ಸಮಯ ಬಂದಿದೆ” ಎಂದು ಹೇಳಿದರು.

ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಉಪಾಧ್ಯಾಯ, “ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮಾತ್ರ ಉತ್ತರಾಖಂಡದ ಅಭಿವೃದ್ಧಿ ಸಾಧ್ಯ ಎಂದು ನಾನು ಭಾವಿಸುತ್ತೇನೆ ಮತ್ತು ಉತ್ತರಾಖಂಡವನ್ನು ಉತ್ತಮ ರಾಜ್ಯವಾಗಿಸಲು ನಾನು ಕೆಲಸ ಮಾಡಲು ಬಯಸುತ್ತೇನೆ” ಎಂದು ಹೇಳಿದರು.

“ತೆಹ್ರಿ ಮತ್ತು ಉತ್ತರಕಾಶಿಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಮಾಡಿದ ಕೆಲಸಗಳಿಂದ ನಾನು ಪ್ರಭಾವಿತನಾಗಿದ್ದೇನೆ. ಬಿಜೆಪಿಯ ಭಾಗವಾಗಲು ನನಗೆ ಈ ಅವಕಾಶವನ್ನು ನೀಡಿದ ಪ್ರಹ್ಲಾದ್ ಜೋಶಿ ಅವರಿಗೆ ನಾನು ಆಭಾರಿಯಾಗಿದ್ದೇನೆ” ಎಂದು ಅವರು ಹೇಳಿದರು.

ಕಾಂಗ್ರೆಸ್‌ನಿಂದ ಹೊರಹಾಕಿದ ಹಿಂದಿನ ಕಾರಣದ ಕುರಿತು ಮಾತನಾಡುತ್ತಾ, “ಬಿಜೆಪಿಯೊಂದಿಗೆ ನಾನು ಇರುವ ಚಿತ್ರವು ವೈರಲ್ ಆಗಿದ್ದು ಅದನ್ನು ವಿಭಿನ್ನ ರೀತಿಯಲ್ಲಿ ವೈಭವೀಕರಿಸಲಾಗಿದೆ ಎಂದು ಹೇಳಿದರು.

ಬುಧವಾರ ಮುಂಜಾನೆ, ಉತ್ತರಾಖಂಡ್ ನಲ್ಲಿ ಪಕ್ಷದ ಮಾಜಿ ಮುಖ್ಯಸ್ಥ ಕಿಶೋರ್ ಉಪಾಧ್ಯಾಯ ಅವರನ್ನು “ಪಕ್ಷ ವಿರೋಧಿ ಚಟುವಟಿಕೆ”ಗಾಗಿ ಕಾಂಗ್ರೆಸ್ ಉಚ್ಚಾಟಿಸಿದೆ. ಅವರನ್ನು ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಜನವರಿ 26 ರಂದು ಬರೆದ ಪತ್ರದಲ್ಲಿ, “ಹಲವಾರು ಎಚ್ಚರಿಕೆಗಳ ನಡುವೆಯೂ ನೀವು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರಣ ತಕ್ಷಣವೇ ಜಾರಿಗೆ ಬರುವಂತೆ ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ನಿಮ್ಮನ್ನು ಹೊರಹಾಕಲಾಗಿದೆ ಎಂದು ಹೇಳಿತ್ತು.

ಕಿಶೋರ್ ಉಪಾಧ್ಯಾಯ ಅವರು 2014 ರಿಂದ 2017 ರವರೆಗೆ ಕಾಂಗ್ರೆಸ್ ನ ಉತ್ತರಾಖಂಡ ಘಟಕದ ಅಧ್ಯಕ್ಷರಾಗಿದ್ದರು. ಮೂಲಗಳ ಪ್ರಕಾರ, ಉಪಾಧ್ಯಾಯ ಅವರು ತೆಹ್ರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಏತನ್ಮಧ್ಯೆ, 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Share