Published
6 months agoon
By
Vanitha Jainಶ್ರೀನಗರ: ಜನೆವರಿ 06(ಯು.ಎನ್.ಐ.) ಜಮ್ಮು ಮತ್ತು ಕಾಶ್ಮೀರದ ನಾಲ್ಕು ಮಾಜಿ ಮುಖ್ಯಮಂತ್ರಿಗಳ ವಿಶೇಷ ಭದ್ರತಾ ದಳ ರಕ್ಷಣೆ (ಎಸ್ಎಸ್ಜಿ) ಹಿಂಪಡೆಯಲು ಜಮ್ಮು ಕಾಶ್ಮೀರ ಸರ್ಕಾರ ನಿರ್ಧರಿಸಿದೆ.
ಜಮ್ಮು ಮತ್ತು ಕಾಶ್ಮೀರದ ನಾಲ್ವರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಗುಲಾಂ ನಬಿ ಆಜಾದ್ ಅವರ ವಿಶೇಷ ಭದ್ರತಾ ಗ್ರೂಪ್ ರಕ್ಷಣೆ (ಎಸ್ಎಸ್ಜಿ) ಹಿಂಪಡೆಯಲು ಕೇಂದ್ರಾಡಳಿತದ ಆಡಳಿತವು ನಿರ್ಧರಿಸಿದೆ ಎಂದು ಆಡಳಿತದ ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಪ್ರಮುಖ ನಾಯಕರ ಮೇಲಿನ ಬೆದರಿಕೆ ಅಂಶಗಳನ್ನು ಪರಿಶೀಲಿಸಿದ ನಂತರ ಭದ್ರತಾ ಪರಿಶೀಲನಾ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ಮಾಜಿ ಮುಖ್ಯಮಂತ್ರಿಗಳಲ್ಲಿ, ಮೂವರು ಕಾಶ್ಮೀರದಲ್ಲಿ ನೆಲೆಸಿದ್ದಾರೆ ಆಜಾದ್ ಮಾತ್ರ ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಫಾರೂಕ್ ಮತ್ತು ಆಜಾದ್ ಅವರಿಗೆ ಮಾತ್ರ ಜೆಡ್ ಪ್ಲಸ್ ಭದ್ರತೆ ಇರುತ್ತದೆ.
ಮೆಹಬೂಬಾ ಮತ್ತು ಒಮರ್ ಬೆದರಿಕೆ ಗ್ರಹಿಕೆಯನ್ನು ಮೌಲ್ಯಮಾಪನ ಮಾಡಿದ ನಂತರ ಜಿಲ್ಲಾ ಪೊಲೀಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಭದ್ರತಾ ವಿಭಾಗದಿಂದ ರಕ್ಷಣೆ ಪಡೆಯುತ್ತಾರೆ.
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಜುಬೇರ್ ಬಂಧನ; ಜರ್ಮನಿ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಕೇಂದ್ರ
ಚೀನಾದ ಕಂಪನಿಗಳು ಭಾರತದ ಕಾನೂನು ಪಾಲಿಸಬೇಕು: ವಿದೇಶಾಂಗ ಸಚಿವಾಲಯ
ಶೀಘ್ರದಲ್ಲೇ ವಾಣಿಜ್ಯ ಹಾರಾಟ ನಡೆಸಲಿದೆ ‘ಆಕಾಶ ಏರ್’
ಫೋನ್ ಹಿಂತಿರುಗಿಸಲು ನಿರಾಕರಿಸಿದ್ದಕ್ಕೆ ಸ್ನೇಹಿತನ ಕೊಂದ ಪಾಪಿ
ಹಿಂದೂ ವ್ಯಕ್ತಿಯ ಅಂತಿಮ ವಿಧಿವಿಧಾನ ನೆರವೇರಿಸಿದ ಮುಸ್ಲಿಂ ಕುಟುಂಬ
ವಿವಾಹ ಜೀವನಕ್ಕೆ ಕಾಲಿರಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್