Connect with us


      
ಕರ್ನಾಟಕ

ಗಂಗಾ-ಕಲ್ಯಾಣ ಯೋಜನೆಯಲ್ಲಿ ಗೋಲ್ ಮಾಲ್ – ಪ್ರಿಯಾಂಕ್ ಖರ್ಗೆ!

Iranna Anchatageri

Published

on

ಬೆಂಗಳೂರು: ಮಾರ್ಚ್ 19 (ಯು.ಎನ್.ಐ.) ದಿ ಕಾಶ್ಮೀರ್ ಪೈಲ್ಸ್ ಗೆ ಇರುವಷ್ಟು ಆಸಕ್ತಿ ರಾಜ್ಯದ ಬಗ್ಗೆ ಇಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಕಾಶ್ಮೀರ್ ಫೈಲ್ಸ್ ಬಗ್ಗೆ ಸಾಕಷ್ಟು ಪ್ರಚಾರ ಮಾಡಿದ್ರು. ರಾಜ್ಯ ಸರ್ಕಾರ ಟ್ಯಾಕ್ಸ್ ಫ್ರೀ ಮಾಡ್ತು. ಸ್ಪೀಕರ್ ಅವರು ಸಿನಿಮಾ ನೋಡಿ ಅಂದ್ರು. ಆದರೆ ನಾನು ಕೇಳೋದು ಇಷ್ಟೇಯಯ ಕಾಶ್ಮೀರ್ ಫೈಲ್ಸ್ ಗೆ ಇವರು ಇಷ್ಟೊಂದು ಆಸಕ್ತಿ ನೀಡ್ತಾರೆ. ಆದರೆ ರಾಜ್ಯದ ಬಗ್ಗೆ ಇವರಿಗೆ ಆಸಕ್ತಿಯಿಲ್ಲ ಎಂದು ತಿಳಿಸಿದರು.

ಸಮಜಕಲ್ಯಾಣ ಇಲಾಖೆಯಲ್ಲಿ ಹಲವು ಯೋಜನೆ ಇವೆ. ಅದರಲ್ಲಿ ಗಂಗಾಕಲ್ಯಾಣ ಯೋಜನೆಯೂ ಒಂದು. 14,777 ಬೋರ್ ವೆಲ್ ಕೊರೆಯಲಾಗಿದೆ. ಅದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಡ್ರಿಲ್ಲಿಂಗ್, ಪಂಪ್ ಅಳವಡಿಕೆ, ಪವರ್ ಮೂರು ಹಂತದಲ್ಲಿ ಆಗಬೇಕು. ಮೊದಲು ಮೂರು ಟೆಂಡರ್ ಕರೆಯಲಾಗ್ತಿತ್ತು. ನಾನು ಸಚಿವನಾಗಿದ್ದಾಗ ಜಿಲ್ಲಾವಾರು ಪ್ಯಾಕೇಜ್ ನೀಡ್ತಿದ್ದೆವು. ಒಬ್ಬ ಕಂಟ್ರಾಕ್ಟರ್ ಗೆ ಎರಡಕ್ಕಿಂತ ಹೆಚ್ಚು ಕೊಡ್ತಿರಲಿಲ್ಲ. ಆಗ ಜಿಲ್ಲಾಧಿಕಾರಿಗಳು ಇದರ ಹೊಣೆ ನೋಡಿಕೊಳ್ತಿದ್ರು. ಕ್ವಾಲಿಟಿ ಪಂಪ್ ಸೆಟ್ ಸಿಗಲೆಂದು ಮೊದಲು ನಾವು ಪಂಪ್ ಸೆಟ್ ಉತ್ಪಾದಕರಿಗೆ ಟೆಂಡರ್ ಕೊಡ್ತಿದ್ದೆವು. ಆದರೆ ಈಗ ಡ್ರಿಲ್, ಪಂಪ್ಸೆಟ್ ಇಬ್ಬರಿಗೂ ಸೇರಿ ಟೆಂಡರ್ ಕೊಡ್ತಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ.

ಆದರೆ ತರಾತುರಿಯಲ್ಲಿ ಕಂಟ್ರ್ಯಾಕ್ಟರ್ ಗಳನ್ನೇ ಚೇಂಜ್ ಮಾಡಿದ್ದಾರೆ. ಕೆಬಿಜೆಎನ್‌ಎಲ್ ನವರಿಗೆ ಗುತ್ತಿಗೆ ಕೊಟ್ಟಿದ್ದಾರೆ. ಅವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕೇವಲ  10/15 ಜನರಿಗೆ ಮಾತ್ರ ಅವಕಾಶ ಮಾಡಿ ಕೊಡುವ ಮೂಲಕ ಇದರಲ್ಲಿ ಎಲ್ಲಾ ನಿಯಮಗಳನ್ನ ಉಲ್ಲಂಘನೆ ಮಾಡಲಾಗಿದೆ. ಗುತ್ತಿಗೆದಾರನಿಗೆ ಕನಿಷ್ಠ 70 ಬೋರ್ ವೆಲ್ ಕೊರೆಯಿಸಿರುವ ಅನುಭವ ಇರಬೇಕು. ಆದರೆ ಅಂತಹ ಅನುಭವವಿಲ್ಲದವರಿಗೆ ಟೆಂಡರ್ ಪ್ರಕ್ರಿಯೆಯಲ್ಲಿ  ಹೇಗೆ ಕ್ವಾಲಿಫೈ ಆದ್ರು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.

ಬೋರ್ ವೆಲ್ ಟೆಂಡರ್ ನಲ್ಲಿ ಅಕ್ರಮದ ಆರೋಪ ಮಾಡಿದ ಪ್ರಿಯಾಂಕ್, ಟೆಂಡರ್ ಅಕ್ರಮದ ಬಗ್ಗೆ ನನಗಂತೂ ಆಚ್ಚರಿಯಿಲ್ಲ. ನಮ್ಮ ದೇಶದ ಪ್ರಧಾನಿ ಡಿಗ್ರಿಯೇ ಫೇಕ್ ಸಿಗ್ತಿದೆ. ಅಂಥದರಲ್ಲಿ ಟೆಂಡರ್ ಫೇಕ್ ಮಾಡೋದು ಕಷ್ಟವಲ್ಲ. ಕೋಟಾ ಶ್ರೀನಿವಾಸ್ ಪೂಜಾರಿ ಒಳ್ಳೆಯವರು. ಆದರೆ ಸಮಾಜಕಲ್ಯಾಣ ಇಲಾಖೆಯಲ್ಲಿನ ಅಧಿಕಾರಿಗಳು ದಾರಿ ತಪ್ಪಿಸ್ತಿದ್ದಾರೆ. ಲಕ್ಷ್ಮಿ ವೆಂಕಟೇಶ್ವರ್ ಅವರಿಗೆ ಟೆಂಡರ್ ಕೊಟ್ಟಿದ್ದಾರೆ. ಮೊದಲು ಅವರಿಗೆ ಟೆಂಡರ್ ಕೊಟ್ಟಿಲ್ಲ. ಎರಡನೇ ತಿಂಗಳಿಗೆ ಎಲಿಜಬಲ್ ಸರ್ಟಿಪಿಕೆಟ್ ಕೊಡ್ತಾರೆ. ಇದು ಹೇಗೆ ಸಾಧ್ಯ ಅನ್ನೋದು ನಮ್ಮ ಪ್ರಶ್ನೆ ಎಂದರು.

ವಾಲ್ಮೀಕಿ ನಿಗಮದಲ್ಲಿ ಟೆಂಡರ್ ಕ್ಯಾನ್ಸಲ್ ಆಗುತ್ತೆ. ಆದಿ ಜಾಂಬವ ನಿಗಮದಲ್ಲಿ ಕ್ವಾಲಿಫೈ ಆಗುತ್ತೆ. ಪಂಚಮುಖಿ ಬೋರ್ ವೆಲ್ ಗೆ ಕೊಟ್ಟಿದ್ದಾರೆ. ಟರ್ನ್ ಅವರ್ ಮೀರಿ ಅಲಾಟ್ ಮಾಡಲಾಗಿದೆ. ಒಂದು ಕಡೆ ಇಲ್ಲದ್ದು ಇನ್ನೊಂದು ಕಡೆ ಹೇಗೆ ಕ್ವಾಲಿಫೈ ಆಯ್ತು ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ ಗಂಗಾಕಲ್ಯಾಣ ಯೋಜನೆ ಅಕ್ರಮದ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.

Share