Connect with us


      




ಕರ್ನಾಟಕ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮರಿಗೆ ಐಟಿ ನೋಟೀಸ್

Vanitha Jain

Published

on

ಹಾಸನ: ಮಾರ್ಚ್ 29 (ಯು.ಎನ್.ಐ.) ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿಯಿಂದ ನೋಟೀಸ್ ನೀಡಲಾಗಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ, ಅದನ್ನು ನೋಡಬೇಕು. ಅದನ್ನು ನೋಡದೆ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ. ಆರ್.ಟಿ.ಓ.ದಲ್ಲಿ ನೂರು ಕೋಟಿ ಇನ್ನೂರು ಕೋಟಿ ಲೂಟಿ ಹೊಡೆದಿದ್ದಾರೆ ಅವರಿಗೇಕೆ ನೋಟೀಸ್ ನೀಡಲ್ಲ ಎಂದು ಪ್ರಶ್ನಿಸಿದರು.

ಇನ್ನು ಇದೇ ವೇಳೆ ಗರಂ ಆದ ರೇವಣ್ಣ, ಒಂದು ಎಕರೆ ಏನು, ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ, ನಾನು ಡಿಸಿಗೆ ಹೇಳಿದ್ದೇನೆ, ನಾನು ಸರ್ವೆ ಮಾಡಿ‌ ಬಿಲ್ ಕೊಟ್ಟರೆ ಸರಿಯಾಗಲ್ಲ, ಆಪ್ ನಲ್ಲಿ ಸರ್ವೆ ಮಾಡಿಸಿ ಎಂದರು.

Share