Connect with us


      




ದೇಶ

ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ: 4 ಸಾವು, 8 ಮಂದಿಗೆ ಗಂಭೀರ ಗಾಯ

Vanitha Jain

Published

on

ವಿರುಧುನಗರ, ಜನವರಿ 01(ಯು.ಎನ್.ಐ) ಶಿವಕಾಶಿ ಬಳಿಯ ನಾಥಂಪಟ್ಟಿ ಸಮೀಪದ ಕಳತ್ತೂರು ಗ್ರಾಮದ ಪಟಾಕಿ ತಯಾರಿಕಾ ಘಟಕದಲ್ಲಿ ಶನಿವಾರ ಬೆಳಗ್ಗೆ ಸ್ಫೋಟ ಸಂಭವಿಸಿ ನಾಲ್ವರು ಸಾವನ್ನಪ್ಪಿದ್ದು, ಎಂಟು ವರ್ಷದ ಬಾಲಕ ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

30 ಕಾರ್ಮಿಕರಲ್ಲಿ ಎಸ್ ಕುಮಾರ್ (38), ಪಿ ಪೆರಿಯಸಾಮಿ (65) ಮತ್ತು ಎಸ್ ವೀರಕುಮಾರ್ (40) ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕಾರ್ಮಿಕ ಪಿ ಮುರುಗೇಶನ್ (38) ಅವರನ್ನು ಚಿಕಿತ್ಸೆಗಾಗಿ ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಒಂದು ಕೋಣೆಯಲ್ಲಿ ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಎಂಟು ಕೊಠಡಿಯಲ್ಲಿ ಮೂರು ಕೊಠಡಿಗಳು ಕುಸಿದಿವೆ.

ಮೂಲಗಳ ಪ್ರಕಾರ, ಪಟಾಕಿ ತಯಾರಿಕಾ ಘಟಕವು ಸಿ ವಜಿವಿಡು ಮುರುಗನ್ ಅವರಿಗೆ ಸೇರಿದೆ. ಘಟಕದಲ್ಲಿ ಸುಮಾರು ಹತ್ತು ಕೊಠಡಿಗಳಿವೆ. ಶನಿವಾರ ಬೆಳಗ್ಗೆ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ಬೆಳಗ್ಗೆ 8.30ರ ಸುಮಾರಿಗೆ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟದ ಸದ್ದು ಕೇಳಿದ ಸಾರ್ವಜನಿಕರು ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಸ್ಫೋಟದ ಶಬ್ದ ಕೇಳಿದ ಸುತ್ತಮುತ್ತಲಿನ ನಿವಾಸಿಗಳು ಪೊಲೀಸ್ ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ನಾಥಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share