ಬೆಂಗಳೂರು: ಜೂನ್ 19 (ಯು.ಎನ್.ಐ.) ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರಲ್ಲಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ಚೆನ್ನೈ ಹಾಗೂ ಊಟಿಯಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಲಾಗಿದೆ.
ಪ್ರಕರಣದ ಆರೋಪಿಯನ್ನು ಪ್ರಕಾಶ್ ಎಂದು ಗುರುತಿಸಲಾಗಿದೆ. ಕಳೆದು ಮೂರು ತಿಂಗಳಿಂದ ಈತ, ತಾನು ಸಚಿವೆಯವರ ಆಪ್ತ ಎಂದು ಅಲ್ಲಿನ ಕೃಷಿಕರಿಗೆ, ಬ್ಯುಸಿನೆಸ್ ಮ್ಯಾನ್ ಗೆ ಆ ಕೆಲಸ.. ಈ ಕೆಲಸ ಮಾಡಿಸಿಕೊಡುವುದಾಗಿ ಲಕ್ಷಾಂತರ ಹಣ ಪಡೆದು ವಂಚನೆ ಮಾಡಿದ್ದಾನೆ. ಸಂಸದೆಗೆ ಕರೆ ಮಾಡಿ ಯಾರೋ ತಿಳಿಸಿದಾಗ ಈ ಪ್ರಕರಣ ಬಯಲಿಗೆ ಬಂದಿದೆ.
ಈ ಸಂಬಂಧ ಶೋಭಾ ಕರದ್ಲಾಂಜೆ ಆಪ್ತ ವರುಣ್ ಆದಿತ್ಯ ಅವರಿಂದ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
