Published
5 months agoon
By
Vanitha Jainಮ್ಯಾನ್ಮಾರ್, ಡಿಸೆಂಬರ್ 15(ಯು.ಎನ್.ಐ): ಕಳೆದ ವಾರ ಪ್ರತಿಭಟನೆ ವರದಿ ಮಾಡುವಾಗ ಬಂಧಿಸಲ್ಪಟ್ಟ ಮ್ಯಾನ್ಮಾರ್ನ ಹವ್ಯಾಸಿ ಫೋಟೋ ಜರ್ನಲಿಸ್ಟ್ ಮಿಲಿಟರಿ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಹೋದ್ಯೋಗಿಗಳು ಮತ್ತು ಕುಟುಂಬದ ಸ್ನೇಹಿತ ತಿಳಿಸಿದ್ದಾರೆ.
ಕೊ ಸೋ ನೈಂಗ್ ಸಾವನ್ನಪ್ಪಿದ ಫೋಟೋ ಜರ್ನಲಿಸ್ಟ್. ಫೆಬ್ರವರಿಯಲ್ಲಿ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿದ ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಸಾವನ್ನಪ್ಪಿದ ಮೊದಲ ಪತ್ರಕರ್ತರಾಗಿದ್ದಾರೆ. ಅಂದಿನಿಂದ 100ಕ್ಕೂ ಹೆಚ್ಚು ಪತ್ರಕರ್ತರನ್ನು ಬಂಧಿಸಲಾಗಿದೆ. ಅದರಲ್ಲಿ ಅರ್ಧದಷ್ಟು ಜನರನ್ನು ಬಿಡುಗಡೆ ಮಾಡಲಾಗಿದೆ.
ಗ್ರಾಫಿಕ್ ಡಿಸೈನರ್ ಮತ್ತು ಹವ್ಯಾಸಿ ಪತ್ರಕರ್ತರಾಗಿದ್ದ ಕೋ ಸೋ ನೈಂಗ್ ಅವರನ್ನು ಶುಕ್ರವಾರ ಬಂಧಿಸಲಾಯಿತು. ಅವರು ಮತ್ತು ಸಹೋದ್ಯೋಗಿಯೊಬ್ಬರು ಡೌನ್ಟೌನ್ ಯಾಂಗೋನ್ನಲ್ಲಿ ಮಿಲಿಟರಿ ಆಡಳಿತದ ವಿರೋಧಿಗಳು ಕರೆ ನೀಡಿದ್ದ ಮೌನ ಮುಷ್ಕರ ಸಮಯದಲ್ಲಿ ಫೆÇೀಟೋಗಳನ್ನು ತೆಗೆದುಕೊಳ್ಳುತ್ತಿದ್ದರು.
ಇದು ಹಲವಾರು ತಿಂಗಳುಗಳು ನಡೆದ ಅತಿದೊಡ್ಡ ರಾಷ್ಟ್ರವ್ಯಾಪಿ ಪ್ರತಿಭಟನೆ. ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ಜನರು ಕೇವಲ ಆರು ಗಂಟೆಗಳ ಕಾಲ ಮಾತ್ರ ಕೆಲಸ ಮಾಡಿದ್ದರು. ಉಳಿದ ಸಮಯದಲ್ಲಿ ಅಂಗಡಿ ಮುಂಗಟ್ಟುಗಳನು ಮುಚ್ಚಿ ಪ್ರತಿಭಟನೆಗೆ ಬೆಮಬಲ ಸೂಚಿಸಿದ್ದರು.
ಕೊ ಸೋ ನೈಂಗ್ ಸರ್ಕಾರಿ ಕಸ್ಟಡಿಯಲ್ಲಿ ಸಾವನ್ನಪ್ಪಿದ ಮೊದಲ ಬಂಧಿತನಲ್ಲ. ಸಾವನ್ನಪ್ಪಿದವರ ಬಗ್ಗೆ ನಿರ್ದಿಷ್ಟ ಲೆಕ್ಕಾಚಾರವಿಲ್ಲ. ಬಂಧನದಲ್ಲಿರುವ ವೇಳೆ ಸತ್ತವರು ರಾಜಕೀಯ ಕಾರ್ಯಕರ್ತರು ಮತ್ತು ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಸದಸ್ಯರು ಎಂದು ತಿಳಿದು ಬಂದಿದೆ. ಇನ್ನು ಮೃತದೇಹಗಳನ್ನು ನೋಡಿದಾಗ ಮೃತದೇಹದ ಮೇಲಿದ್ದ ಕಲೆಗಳು, ಗುರುತುಗಳು ಚಿತ್ರಹಿಂಸೆಗೆ ಒಳಗಾಗಿರುವಮತೆ ತೋರುತ್ತಿತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ.
ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡ ಹಿರಿಮೆ ಸಾರಿದ ಸಂಸದ
ಶ್ರೀಲಂಕ ಆರ್ಥಿಕ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ವಿರುದ್ಧ ತೀವ್ರಗೊಂಡ ಹೋರಾಟ
ಮೆಕ್ಸಿಕೋದಲ್ಲಿ ಗೋಡೆಗೆ ಡಿಕ್ಕಿ ಹೊಡೆದ ಬಸ್: 14 ಮಂದಿ ಸಾವು
ಪ್ರಪಂಚದಲ್ಲಿ ಎದುರಾಗಿದೆ ಮಂಕಿಪಾಕ್ಸ್ ಭೀತಿ; ಏನಿದು ಮಂಕಿಪಾಕ್ಸ್? ಲಕ್ಷಣಗಳೇನು?
ಭಾರತದಲ್ಲಿ ಯುವತಿಯನ್ನು ವೇಶ್ಯಾಗೃಹಕ್ಕೆ ಮಾರಾಟಮಾಡಿದ ಬಾಂಗ್ಲಾ ದಂಪತಿಗೆ ಮರಣದಂಡನೆ
ಕಾನ್ ಚಲನಚಿತ್ರೋತ್ಸವ; ರೆಡ್ ಕಾರ್ಪೆಟ್ ಮೇಲೆ ಸಚಿವ ಅನುರಾಗ್ ಠಾಕೂರ್ ಜೊತೆ ಸಿನಿ ಸ್ಟಾರ್ಸ್