Published
5 months agoon
ಬೆಳಗಾವಿ: (ಸುವರ್ಣಸೌಧ) ಡಿಸೆಂಬರ್ 15 (ಯು.ಎನ್.ಐ.) ಎಂ.ಎಸ್ ಪಿ ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭಿಸಲಾಗಿದೆ. ಜನವರಿ ಒಂದರಿಂದ ಖರೀದಿ ಪ್ರಾರಂಭಿಸಲಾಗುವುದೆಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಉಮೇಶ್ ಕತ್ತಿಯವರು ಉತ್ತರಿಸಿದರು.
ಶಾಸಕ ವೇಂಕಟರಾವ್ ನಾಡಗೌಡರ ಪ್ರಶ್ನೆಗೆ ವಿಧಾನಸಭೆ ಕಲಾಪದಲ್ಲಿ ಉತ್ತರಿಸಿದ ಸಚಿವ ಉಮೇಶ್ ಕತ್ತಿ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ ಹಾಗೂ ಜೋಳ ಖರೀದಿಯ ನೊಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ. ಜನವರಿ ಒಂದರಿಂದ ರಾಜ್ಯದಲ್ಲಿ ಖರೀದಿ ಪ್ರಾರಂಭಿಸಲಾಗುವುದೆಂದು ತಿಳಿಸಿದರು.
ಕೇಂದ್ರ ಸರ್ಕಾರದ ಆದೇಶದ ಅನ್ವಯ 5ಲಕ್ಷ ಮೇ.ಟನ್ ಭತ್ತ, 2.10 ಲಕ್ಷ ಮೇ.ಟನ್ ರಾಗಿ ಹಾಗೂ 1.10 ಲಕ್ಷ ಮೇ.ಟನ್ ಜೋಳವನ್ನು ಖರೀದಿ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ, ಇದರ ಹೊರತಾಗಿಯೂ, ಜೋಳ, ರಾಗಿ ಹಾಗೂ ಭತ್ತವನ್ನು ನೋಂದಣಿ ಮಾಡಿದ್ದರೆ ಖರೀದಿ ಮಾಡಲಾಗುವುದೆಂದು ವಿಧಾನಸಭೆಯ ಕಲಾಪದಲ್ಲಿ ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಸಿದರು.
ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿರುವ ಹಿನ್ನೆಲೆ, ಇದುವರೆಗೂ 15078 ಮೇ.ಟನ್ ಭತ್ತ ಮಾರಾಟ ಮಾಡಲು ರೈತರು ನೋಂದಣಿ ಮಾಡಿರುತ್ತಾರೆ ಎಂದು ಈ ವೇಳೆ ಸಚಿವರಾದ ಉಮೇಶ್ ಕತ್ತಿ ಸದನಕ್ಕೆ ತಿಳಿಸಿದರು.
ಬಿಡಿಎ ಬಡಾವಣೆ ಮನೆಗಳ ಸಕ್ರಮಕ್ಕೆ ನಿರ್ಧಾರ: ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಪ್ರತಾಪ್ ರೆಡ್ಡಿ ನೇಮಕ
ಡೆಂಘೀ ಪ್ರಕರಣಗಳು ಹೆಚ್ಚಾಗದಂತೆ ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ
ಶಾಲಾ ಮಕ್ಕಳೊಂದಿಗೆ ಸಿಎಂ ಸಂವಾದ; ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದ ಬೊಮ್ಮಾಯಿ
ಎಂಬಿಎ ಪದವೀಧರೆಯಾಗಿದ್ರೂ ಕೆಲಸ ಸಿಗದೆ ಉಡುಪಿಯ ಸಹನಾ ಸಾವು; ಡಿಕೆಶಿ ಸಂತಾಪ
ರಾಷ್ಟ್ರಗೀತೆ ಹಾಡೋದನ್ನು ಮುತಾಲಿಕ್ ಹೇಳಿ ಕೊಡಬೇಕಾ? – ಜಮೀರ್