Connect with us


      




ದೇಶ

ನಾಳೆಯಿಂದ ತೆಲಂಗಾಣದಲ್ಲಿ ಮಧ್ಯಾನದವರೆಗೆ ಮಾತ್ರ ತರಗತಿಗಳು: ಶ್ರೀದೇವಸೇನೆ

UNI Kannada

Published

on

ತೆಲಂಗಾಣ : ಮಾರ್ಚ್ 14 (ಯು.ಎನ್.ಐ.) ನಾಳೆಯಿಂದ (ಮಾರ್ಚ್ 15) ತೆಲಂಗಾಣದಲ್ಲಿ ಅರ್ಧ ದಿನ ಶಾಲೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಾಲೆಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 12.30 ರವರೆಗೆ ಮುಂದುವರಿಯಲಿವೆ. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ನಡೆಯಲಿವೆ. ಹತ್ತನೇ ತರಗತಿ ಪರೀಕ್ಷೆಗಳು ಮೇ 20 ರವರೆಗೆ ನಡೆಯುವುದರಿಂದ ಅದೇ ದಿನ ಶೈಕ್ಷಣಿಕ ವರ್ಷದ ಕೊನೆಯ ಕೆಲಸದ ದಿನವಾಗಿರುತ್ತದೆ.

ಆದರೆ, ತೆಲಂಗಾಣ ರಾಜ್ಯದಲ್ಲಿ ಬಿಸಿಲಿನ ಝಳದ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇದಕ್ಕೂ ಮುನ್ನ ಇದೇ ತಿಂಗಳ 16ರಿಂದ ಮದ್ಯಾನದ ವರೆಗೆ ಬಂದ್ ನಡೆಸುವುದಾಗಿ ಸರ್ಕಾರ ಘೋಷಿಸಿತ್ತು. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಶ್ರೀ ದೇವಸೇನೆ ಸೋಮವಾರ ಅಧಿಕೃತ ಆದೇಶ ಹೊರಡಿಸಿದ್ದಾರೆ.

Share