Connect with us


      




ಸಿನೆಮಾ

ನಟ ಪುನೀತ್ ರಾಜ್‍ಕುಮಾರ್ ಕನಸಿನ ಕೂಸು ‘ಗಂಧದ ಗುಡಿ’ ಅನಾವರಣ

Vanitha Jain

Published

on

ಬೆಂಗಳೂರು, ಡಿಸೆಂಬರ್ 6, (ಯು.ಎನ್.ಐ): ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರ ಕನಸಿನ ಕೂಸು ‘ಗಂಧದ ಗುಡಿ’ ಡಾಕ್ಯುಮೆಂಟರಿ ಟೀಸರ್ ಸೋಮವಾರ ಪಿಆರ್‍ಕೆ ಆಡಿಯೋ ಯುಟ್ಯೂಬ್ ಚಾನಲ್‍ನಲ್ಲಿ ಅನಾವರಣಗೊಂಡಿದೆ.

ಕರ್ನಾಟಕದ ದಟ್ಟಡವಿಯ ಸೌಂದರ್ಯ ಮತ್ತು ವನ್ಯಮೃಗಗಳ ಜಗತ್ತಿನ ಪರಿಚಯವನ್ನು ‘ಗಂಧದ ಗುಡಿ’ ಎಂಬ ಹೆಸರಿನಲ್ಲಿ ಜನರ ಮುಂದಿಟ್ಟಿದ್ದಾರೆ ಪುನೀತ್ ರಾಜ್ ಕುಮಾರ್.

ಈ ಡಾಕ್ಯುಮೆಂಟರಿಯಲ್ಲಿ ಬರುವ ಒಂದೊಂದು ಶಾಟ್‍ಗಳು ಅದ್ಭುತವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ 2022ರಲ್ಲಿ ಥಿಯೇಟರ್‍ಗಳಿಗೆ ಲಗ್ಗೆ ಇಡಲಿದೆ.

ಅಮೋಘ ವರ್ಷ ಅವರು ಇದರ ನಿರ್ದೇಶಕರಾಗಿದ್ದು, ಪಿಆರ್‍ಕೆ ಪ್ರೊಡಕ್ಷನ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮತ್ತು ಮಡ್‍ಸ್ಕಿಪ್ಪರ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿದೆ.

ಈ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು,’ ಅಪ್ಪು ಅವರ ಕನಸಿದು, ಅದ್ಭುತ ಪಯಣ, ನಮ್ಮ ನೆಲದ ಘನತೆಯನ್ನು ಮೆರೆಸುವ ಕಥನ, ಮರುಕಳಿಸಿದ ಚರಿತ್ರೆಯಿದು- ಗಂಧದಗುಡಿ’ ಎಂದು ಫೇಸ್‍ಬುಕ್ ಖಾತೆಯಲ್ಲಿ ಬರೆದು ಟೀಸರ್ ಅನ್ನು ಹಂಚಿಕೊಂಡಿದ್ದಾರೆ.

Share