Connect with us


      




ಕ್ರೀಡೆ

ಸಿರಾಜ್ ಗೆ ಬಿಸಿ ಮುಟ್ಟಿಸಿದ ಗವಾಸ‍್ಕರ್

UNI Kannada

Published

on

ದೆಹಲಿ: ಜನವರಿ 02,(ಯು.ಎನ್.ಐ.)  ದಕ್ಷಿಣ ಆಫ್ರಿಕ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ವೇಗಿ ಮಹ್ಮದ್ ಸಿರಾಜ್ ಪ್ರವರ್ಥನೆಯ ಬಗ್ಗೆ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಆಕ್ಷೇಪಿಸಿದ್ದಾರೆ.

ದಕ್ಷಿಣ ಆಫ್ರಿಕ ಉಪನಾಯಕ ಬವುಮ ರನ್ ಗಾಗಿ ಓಡದಿದ್ದರೂ ಸಿರಾಜ್ ಆತನ ಮೇಲೆ ಬಾಲ್ ಎಸದದ್ದೇಕೆ? ಎಂದು ಪ್ರಶ್ನೆ ಮಾಡಿದರು. ಸಿರಾಜ್ ಎಸತಕ್ಕೆ ರಕ್ಷಣಾತ್ಮಕ ಆಟ ಆಡಿದ ಬವುಮ ರನ್ ಗಾಗಿ ಯತ್ನಿಸಲೇ ಇಲ್ಲ. ಆದರು ಫಾಲೊ ಅಪ್ನಲ್ಲಿ  ಚೆಂಡನ್ನ ಸಿರಾಜ್, ಬವುಮಾ ಮೇಲೆ ಎಸೆದ್ದಿದ್ದಾರೆ. ಇದರಿಂದಾಗಿ ಚೆಂಡು ಅವರ ಎಡಗಾಲಿಗೆ ತಗುಲಿ ಗಾಯಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗವಾಸ್ಕರ್ ಬವುಮ ರನ್ ಗಾಗಿ ಯತ್ನಿಸದೇ ಇದ್ದರೂ ಸಿರಾಜ್ ನಡೆದುಕೊಂಡ ರೀತಿಯ ಬಗ್ಗೆ ಆಕ್ಷೇಪಿಸಿದ್ದಾರೆ. ಭಾರತ ತಂಡದ ಮ್ಯಾನೆಜ್ಮೆಂಟ್ ಆತನ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

Share