Published
5 months agoon
ಹುಬ್ಬಳ್ಳಿ, ಡಿ 7 (ಯುಎನ್ಐ) ರಾಜ್ಯದಲ್ಲಿ ಶೀಘ್ರದಲ್ಲೇ ಜಿನೋಮ್ ಸ್ವೀಕ್ವೆನ್ಸ್ ಲ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹುಬ್ಬಳ್ಳಿಯ ತಮ್ಮ ನಿವಾಸದ ಬಳಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಏಕೈಕ ಜಿನೋಮ ಸೀಕ್ವೆನ್ಸ್ ಲ್ಯಾಬ್ ಇದೆ. ಹೀಗಾಗಿ ಕೋವಿಡ್ ಪರೀಕ್ಷಾ ವರದಿಗಳು ಶೀಘ್ರವಾಗಿ ಸಿಗುತ್ತಿಲ್ಲ ಎಂದು ಪತ್ರಕರ್ತರು ಪ್ರಶ್ನೆ ಎತ್ತಿದಾಗ ಈ ಬಗ್ಗೆ ಉತ್ತರಿಸಿದ ಬೊಮ್ಮಾಯಿ, ಪ್ರತಿಯೊಂದು ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಗೆ ಲ್ಯಾಬ್ ಗಳಿವೆ. ಆದರೆ, ಜಿನೋಮ್ ಸೀಕ್ವೆನ್ಸ್ ಪರಿಣಿತವಾಗಿರುವಂತಹ ವ್ಯವಸ್ಥೆ ಬೇಕು. ನಾವು ಎಲ್ಲವನ್ನೂ ಜಿನೋಮ್ ಟೆಸ್ಟ್ ಮಾಡುತ್ತಿಲ್ಲ. ಈಗ ಒಮೈಕ್ರಾನ್ ಬಂದಿದ್ದರಿಂದ ಎಲ್ಲೆಲ್ಲಿ ಸಂಶಯ ಬಂದಿದೆಯೋ ಅಲ್ಲಲ್ಲಿ ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ದೃಢಪಡಿಸಿಕೊಳ್ಳಲು ಎನ್ ಸಿ ಬಿ ಎಸ್ ಗೂ ಕಳುಹಿಸುತ್ತಿದ್ದೇವೆ. ಅತೀ ಶೀಘ್ರದಲ್ಲೇ ಟೆಸ್ಟ್ ರಿಪೋರ್ಟ್ ಬರುತ್ತಿವೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ ಅಂತಾ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ
ಜಿನೋಮ್ ಸೀಕ್ವೆನ್ಸ್ ಲ್ಯಾಬ್ ಗಳ ಸಂಖ್ಯೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. ಅದಕ್ಕೆ ಬೇಕಾಗಿರುವುಂತ ಪರಿಣಿತರ ವ್ಯವಸ್ಥೆಯಾಗಬೇಕು. ಅದಕ್ಕೇ ಬೇಕಾಗಿರುವ ಲ್ಯಾಬ್ ಉಪಕರಣಗಳ ಬಗ್ಗೆ ಕ್ರಮಕೈಗೊಂಡಿದ್ದೇವೆ. ಈ ಬಗ್ಗೆ ಆರೋಗ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ಶೀಘ್ರದಲ್ಲೇ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸ್ ಲ್ಯಾಬ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಹೊಸದಾಗಿ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಅವರ ಬಗ್ಗೆ ಒಳ್ಳೆಯ ನಿರೀಕ್ಷೆಗಳು ಇದ್ದವು. ಆದರೆ, ಅವರು ಇತ್ತೀಚಿಗೆ ತುಂಬಾನೇ ಸುಳ್ಳುಗಳನ್ನು ಹೇಳುತ್ತಿದ್ದಾರೆ ಅಂತಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಬೊಮ್ಮಾಯಿ, ಸಿದ್ದರಾಮಯ್ಯ ಅವರ ಬಗ್ಗೆ ತುಂಬಾನೇ ಗೌರವ ಇತ್ತು. ಅವರ ಇತ್ತೀಚಿನ ಮಾತುಗಳು ತುಂಬಾನೇ ನಿರಾಶೆ ತರಿಸಿವೆ ಅಂತಾ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದರು.
ಕೋವಿಡ್ ಪರೀಕ್ಷೆಗೆ ಹೋರಾಟ, ಕ್ವಾರಂಟೈನ್ಗೆ ಸ್ಥಳ ಇಲ್ಲ.. ಹದಗೆಟ್ಟ ಚೀನಾ ಪರಿಸ್ಥಿತಿ!
ಕೋವಿಡ್ ಹಾವಳಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1.27 ಲಕ್ಷ ಹೊಸ ಕೇಸ್, 1,059 ಸಾವು
ಅಗತ್ಯವಿರುವ ಸುದ್ದಿ: ಒಮೈಕ್ರಾನ್ ಸೇರಿ ಹಲವು ವೈರಸ್ ಪತ್ತೆ ಮಾಡಲಿದೆ ಹೊಸ ಆರ್ಟಿ-ಪಿಸಿಆರ್ ಕಿಟ್
ಡೆಡ್ಲಿ ಕೋವಿಡ್: ಕಳೆದ 24 ಗಂಟೆಯಲ್ಲಿ 893 ಮಂದಿ ಸಾವು!
ಆತಂಕ ಹೆಚ್ಚಿಸಿದ ನಿಯೋಕೋವ್ ರೂಪಾಂತರಿ!
ಒಮೈಕ್ರಾನ್ ಉಪ ರೂಪಾಂತರಿ ಬಿಎ-2 ಇಂಧೋರ್ ನಲ್ಲಿ ಪತ್ತೆ!