Published
6 months agoon
ಮಿನಾಸ್ ಗೆರೈಸ್ : ಜನೆವರಿ 09 (ಯು.ಎನ್.ಐ) ಬ್ರೆಜಿಲ್ನ ಮಿನಾಸ್ ಗೆರೈಸ್ ರಾಜ್ಯದಲ್ಲಿ ನಿನ್ನೆ ದೊಡ್ಡ ಅವಘಡವೊಂದು ಸಂಭವಿಸಿದೆ. ಸರೋವರದಲ್ಲಿ ಕೆಲವು ದೋಣಿಗಳು ವಿಹರಿಸುತ್ತಿರುವಾಗ ಬೃಹತ್ ಬೆಟ್ಟದಿಂದ ದೈತ್ಯಾಕಾರದ ಬಂಡೆಗಲ್ಲು ಜಾರಿ ಬಿದ್ದಿದೆ. ಕಲ್ಲಿನ ಬಂಡೆ ಬೀಳುತ್ತಿರುವ ದೃಶ್ಯವನ್ನು ಕಂಡು ಕೆಲವರು ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಆದರೆ, ಮೂರು ದೋಣಿಗಳು ಸಿಲುಕಿಕೊಂಡಿದ್ದರಿಂದ 7 ಮಂದಿ ಸಾವಿಗೀಡಾದರು. 32 ಮಂದಿ ಗಾಯಗೊಂಡರಲ್ಲದೆ, 20 ಪ್ರವಾಸಿಗರು ನಾಪತ್ತೆಯಾಗಿದ್ದಾರೆ.
😱 Credo #capitolio pic.twitter.com/Izt4xeyhlh
— Gustavo Campos (@gefcamposs) January 8, 2022
ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡ ಮಿನಾಸ್ ಗೆರೈಸ್ ನ ಅಗ್ನಿಶಾಮಕ ದಳದ ಕಮಾಂಡರ್ ಕರ್ನಲ್ ಎಡ್ಗಾರ್ಡ್ ಎಸ್ಟೆವೊ ಡಿ ಸಿಲ್ವಾ, ಸೋ ಜೋಸ್ ಡ ಬಾರ್ರಾ ಮತ್ತು ಕ್ಯಾಪಿಟೋಲಿಯೊ ನಗರಗಳ ಮಧ್ಯೆದಲ್ಲಿ ಈ ದುರುಂತ ಸಂಭವಿಸಿದೆ. ಟೂರಿಸ್ಟ್ ಸ್ಥಳವಾಗಿರುವ ಫರ್ನಾಸ್ ಸರೋವರದಲ್ಲಿ ದೊಡ್ಡ ಬಂಡೆಯೊಂದು ದಿಢೀರಂತ ಮುರಿದು ಬಿದ್ದಿದೆ. ಈ ವೇಳೆ ಆ ಸ್ಥಳದಲ್ಲಿದ್ದ 3 ಪ್ರವಾಸಿ ದೋಣಿಗಳು ಸಿಲುಕಿಕೊಂಡವು ಎಂದು ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ಬಂಡೆಯ ಭಾಗವು ಕುಸಿದಿದೆ ಎಂದು ಅಲ್ಲಿನ ಗವರ್ನರ್ ರೋಮು ಜೆಮಾ ಹೇಳಿದ್ದಾರೆ. ಪ್ರವಾಸಿಗರಿಗೆ ಅಗತ್ಯ ರಕ್ಷಣೆ ಮತ್ತು ಸಹಾಯ ಒದಗಿಸುವ ಕಾರ್ಯ ಭರದಿಂದ ಸಾಗಿದೆ. ನಾಪತ್ತೆಯಾದವರ ಹುಡುಕಾಟ ಮುಂದುವರಿದಿದ್ದು, ಈಜು ತಜ್ಞರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.