Connect with us


      
ರಾಜಕೀಯ

ಗೋವಾ ವಿಧಾನಸಭಾ ಚುನಾವಣೆ: ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಿಸಿದ ಕಾಂಗ್ರೆಸ್

Vanitha Jain

Published

on

ನವದೆಹಲಿ/ಪಣಜಿ: ಜನೆವರಿ 10 (ಯು.ಎನ್.ಐ.) ಮುಂಬರುವ ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

40 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಫೆಬ್ರವರಿ 14 ರಂದು ನಡೆಯಲಿರುವ ಒಂದೇ ಹಂತದ ಚುನಾವಣೆಗೆ ಏಳು ಅಭ್ಯರ್ಥಿಗಳನ್ನು ಪಟ್ಟಿ ಬಿಡುಗಡೆ ಮಾಡಲಾಗಿದೆ

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿಯ ಸಭೆಯ ನಂತರ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಯಿತು.

ಅಭ್ಯರ್ಥಿಗಳು ಜಿತೇಂದ್ರ ಗಾಂವ್ಕರ್, ರೊಡಾಲ್ಫ್ ಲೂಯಿಸ್ ಫೆನಾರ್ಂಡಿಸ್, ರಾಜೇಶ್ ಫಲ್ಡೆಸ್ಸಾಯಿ, ಮನಿಶಾ ಶೆನ್ವಿ ಉಸ್ಗಾಂವ್ಕರ್, ವಿರಿಯಾಟೊ ಫೆನಾರ್ಂಡಿಸ್, ಒಲೆನ್ಸಿಯೊ ಸಿಮೋಸ್ ಮತ್ತು ಅವೆರ್ಟಾನೊ ಫುರ್ಟಾಡೊ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.

ಕಳೆದ ತಿಂಗಳು ಕಾಂಗ್ರೆಸ್ ಎಂಟು ಅಭ್ಯರ್ಥಿಗಳ ಹೆಸರನ್ನು ಚುನಾವಣೆಗೆ ಘೋಷಿಸಿತ್ತು. ಎಐಸಿಸಿ ಗೋವಾ ಡೆಸ್ಕ್ ಉಸ್ತುವಾರಿ ದಿನೇಶ್ ಗುಂಡೂರಾವ್ ಫಟೋರ್ಡಾ (ದಕ್ಷಿಣ ಗೋವಾ) ಮತ್ತು ಮಾಯೆಮ್ (ಉತ್ತರ ಗೋವಾ) ಕ್ಷೇತ್ರಗಳಲ್ಲಿ ಅದರ ಮೈತ್ರಿ ಪಾಲುದಾರ ಗೋವಾ ಫಾರ್ವರ್ಡ್ ಪಾರ್ಟಿ ಸ್ಪರ್ಧಿಸಲಿದೆ.

ಫುರ್ಟಾಡೊ ದಕ್ಷಿಣ ಗೋವಾದ ನವೆಲಿಮ್ ಕ್ಷೇತ್ರದಿಂದ, ಗಾಂವ್ಕರ್ ಪೆರ್ನೆಮ್‍ನಿಂದ ಮತ್ತು ರೋಡಾಲ್ಫ್ ಫೆನಾರ್ಂಡಿಸ್ ಸೇಂಟ್ ಕ್ರೂಜ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ವಾಲ್ಪೋಯ್ ಕ್ಷೇತ್ರದಿಂದ ಉಸ್ಗಾಂವ್ಕರ್ ಕಣದಲ್ಲಿದ್ದರೆ, ನಿವೃತ್ತ ರಕ್ಷಣಾ ಅಧಿಕಾರಿ ವಿರಿಯಾಟೊ ಫೆನಾರ್ಂಡಿಸ್ ದಾಬೋಲಿಮ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಸ್ಥಳೀಯ ಮೀನುಗಾರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಒಲೆನ್ಸಿಯೊ ಸಿಮೋಸ್ ಕೊರ್ಟಾಲಿಮ್ ಸ್ಥಾನದಿಂದ ನಾಮನಿರ್ದೇಶಿತರಾಗಿದ್ದಾರೆ.

Share