Published
5 months agoon
ನವದೆಹಲಿ: ಡಿ. 15 (ಯು.ಎನ್.ಐ) ಗೂಗಲ್ನ ಉದ್ಯೋಗಿಗಳು ಕೋವಿಡ್-19 ಲಸಿಕೆ ಪಡೆಯದಿದ್ದರೇ, ನಿಯಮಗಳನ್ನು ಪಾಲಿಸದಿದ್ದರೇ ಅವರ ವೇತನವನ್ನು ಕಡಿತಗೊಳಿಸಲಾಗುತ್ತದೆ. ಅಲ್ಲದೇ ಅಂತಿಮವಾಗಿ ಕೆಲಸದಿಂದ ವಜಾಗೊಳಿಸಲಾಗುವುದೆಂದು ಉದ್ಯೋಗಿಗಳಿಗೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.
ಉದ್ಯೋಗಿಗಳು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡಲು ಮತ್ತು ಪುರಾವೆಗಳನ್ನು ತೋರಿಸುವ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಜ.18 ರ ತನಕ ಕಾಲಾವಕಾಶವನ್ನು ನೀಡಲಾಗಿದೆ ಎಂದು ಗೂಗಲ್ ಹೊರಡಿಸಿರುವ ಮೆಮೊ ಹೇಳಿದೆ.
ಆ ದಿನಾಂಕದ ನಂತರ ಈ ಬಗ್ಗೆ ಮಾಹಿತಿ ಅಪ್ಲೋಡ್ ಮಾಡದ ಅಥವಾ ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳನ್ನು ಸಂಸ್ಥೆ ಸಂಪರ್ಕಿಸಿ ಕ್ರಮಕೈಗೊಳ್ಳಲಿದೆ. ಜನವರಿ 18 ರೊಳಗೆ ಲಸಿಕೆ ನಿಯಮಗಳನ್ನು ಪಾಲಿಸದ ಉದ್ಯೋಗಿಗಳನ್ನು 30 ದಿನಗಳವರೆಗೆ ಪಾವತಿ ಸಹಿತ ರಜೆಯಲ್ಲಿ ಇರಿಸಲಾಗುತ್ತದೆ. ನಂತರ ಆರು ತಿಂಗಳವರೆಗೆ ಪಾವತಿಯಿಲ್ಲದ ವೈಯಕ್ತಿಕ ರಜೆ ಮತ್ತು ಅಂತಿಮವಾಗಿ ವಜಾಗೊಳಿಸಲಾಗುತ್ತದೆ ಎಂದು ಹೇಳಿದೆ.
ಒಮಿಕ್ರಾನ್ ರೂಪಾಂತರದ ಭೀತಿ ಹಿನ್ನೆಲೆ ಉದ್ಯೋಗಿಗಳು ಕಚೇರಿಗೆ ಹಿಂದಿರುಗುವ ಯೋಜನೆಯನ್ನು ಅನಿರ್ದಿಷ್ಟವಾಗಿ ವಿಳಂಬಗೊಳಿಸಿತ್ತು. ಜನವರಿ 10 ರಿಂದ ವಾರದಲ್ಲಿ ಸುಮಾರು ಮೂರು ದಿನಗಳ ಕಾಲ ಸಿಬ್ಬಂದಿ ಕಚೇರಿಗೆ ಮರಳುವ ನಿರೀಕ್ಷೆಯಿದೆ.
ನಿಮ್ಮ ಗೂಗಲ್ ಕ್ರೋಮ್ ಬ್ರೌಸರ್ಅನ್ನು ಬೇಗ ಅಪ್ಡೇಟ್ ಮಾಡಿಕೊಳ್ಳಿ.. ಇಲ್ಲಾಂದ್ರೆ?
ಮನೆಯಲ್ಲಿ ಕೂತು ನಿಮ್ಮ ಮೊಬೈಲ್ ರಿಪೇರಿ ಮಾಡಿಕೊಳ್ಳಿ! ಗೂಗಲ್ ಕೊಡುತ್ತೆ ಮಾಹಿತಿ
ಭಾರತದಲ್ಲಿ ಕೋವಿಡ್ ದುರ್ಬಲ; 70 ಸಾವಿರಕ್ಕಿಂತ ಕಡಿಮೆ ಕೇಸ್!
ಕೋವಿಡ್ ಹಾವಳಿ: ಹೊಸ ಪ್ರಕರಣಗಳಲ್ಲಿ 10.4% ಇಳಿಕೆ, 24 ಗಂಟೆಗಳಲ್ಲಿ 2.09 ಲಕ್ಷ ಹೊಸ ಕೇಸ್
ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಎಫ್ಐಆರ್
ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಶೇ 16.4ರಷ್ಟು ಇಳಿಕೆ!