Connect with us


      
ರಾಜಕೀಯ

ಸರ್ಕಾರವೇ ಈಶ್ವರಪ್ಪರನ್ನ ರಕ್ಷಣೆ ಮಾಡ್ತಿದೆ: ಡಿಕೆಶಿ ವಾಗ್ದಾಳಿ

Lakshmi Vijaya

Published

on

ಬೆಂಗಳೂರು: ಏಪ್ರಿಲ್ 16 (ಯು.ಎನ್.ಐ.) ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಬಳಿಕ ದೊಡ್ಡ ಷಡ್ಯಂತ್ರ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.

ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡುವ ಸಾಧ್ಯತೆ ಇತ್ತು. ಈಶ್ವರಪ್ಪ ಪ್ರಕರಣದಿಂದ ವಿಷಯ ಬೇರೆಡಗೆ ಗಮನ ಸೆಳೆಯುವ ಕೆಲಸ ಮಾಡ್ತಾ ಇದ್ರು. ಇದರಲ್ಲಿ ದೊಡ್ಡ ದೊಡ್ಡವರ ಹೆಸರಿದೆ. ಎಲ್ಲರ ಹೆಸರು ಹೊರಗೆ ಬರುತ್ತೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸರ್ಕಾರವೇ ಈಶ್ವರಪ್ಪ ಅವರನ್ನ ರಕ್ಷಣೆ ಮಾಡ್ತಿದೆ ಎಂದು ಆರೋಪಿಸಿದ ಅವರು ಸಿಎಂ‌ ಹಾಗೂ ಯಡಿಯೂರಪ್ಪ ನೇರವಾಗಿ ಬಂದು ಈಶ್ವರಪ್ಪ ತಪ್ಪು ಮಾಡಿಲ್ಲ ಅಂತಾರೆ. ತನಿಖೆ ಮೊದಲೇ ಕ್ಲೀನ್ ಚಿಟ್ ನೀಡ್ತಾ ಇದಾರೆ.ನಾನು ಬೊಮ್ಮಾಯಿ ಬಗ್ಗೆ ಏನೋ ಅಂದು ಕೊಂಡಿದ್ದೆ. ಆದರೆ ರಾಜ್ಯದಲ್ಲಿ ಆಡಳಿತ ಹಾಳಾಗ್ತಾ ಇರೋದಕ್ಕೆ ಅವರೇ ಕಾರಣ. ತನಿಖೆ ಹಾದಿಯ‌ ದಿಕ್ಕುತಪ್ಪಿಸ್ತಿದ್ದಾರೆ ಎಂದು ಹೇಳಿದರು.

ಸಣ್ಣ ಸಣ್ಣ ಗುತ್ತಿಗೆದಾರರನ್ನ ಮುಗಿಸುವ ಕೆಲಸ ಮಾಡಿದ್ದಾರೆ. ಸಣ್ಣ ಸಣ್ಣ ಗುತ್ತಿಗೆದಾರರಿಂದ ಕಮಿಷನ್ ಪಡೆಯಲು ಸಾಧ್ಯವಿಲ್ಲ ಎಂದು ದೊಡ್ಡವರಿಗೆ ಕಾಮಗಾರಿ ನೀಡ್ತಾ ಇದ್ದಾರೆ. ನಾವು ಸಣ್ಣ ಸಣ್ಣ ಗುತ್ತಿಗೆದಾರರ ಪರ ಇರುವವರು ಎಂದು, ಕೆ.ಎಸ್. ಈಶ್ವರಪ್ಪ ವಿರುದ್ಧ ಇನ್ನೂ ಸರಿಯಾದ ಕೇಸ್ ಹಾಕಿಲ್ಲ ಎಂದು ಗುಡುಗಿದರು.

Share