Published
5 months agoon
By
UNI Kannadaಬೆಳಗಾವಿ (ಸುವರ್ಣ ವಿಧಾನಸೌಧ): ಡಿಸೆಂಬರ್ 15,(ಯು.ಎನ್.ಐ.) ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು 72.000 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಆರೋಪಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಪರಿಷತ್ ಅಧಿವೆಶನದಲ್ಲಿ ಇಂದು ಅವರು ಮಾತನಾಡಿದರು. ಬೆಂಗಳೂರು ಗ್ರಾಮಾಂತರದಲ್ಲಿ 36.220 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಇದರಲ್ಲಿ 4.900 ರಷ್ಟು ಪ್ರಕರಣಗಳಷ್ಟೆ ಇತ್ಯರ್ಥವಾಗಿದ್ದೂ ಕೇವಲ 61 ಮಂದಿಗೆ ಮಾತ್ರ ಶಿಕ್ಷೆ ನೀಡಲಾಗಿದೆ ಎಂದರು, ಶಿಕ್ಷೆಗೆ ಒಳಪಟ್ಟವರ ಸಂಖ್ಯೆಯನ್ನ ತೋರಿಸಿ ಇತ್ಯರ್ಥವಾದ ಪ್ರಕರಣಗಳಲ್ಲಿ 61 ಮಂದಿಗೆ ಮಾತ್ರ ಶಿಕ್ಷೆಗೊಳಪಡಿಸಲಾಗಿದೆ ಎಂದರೆ ಭೂಗಳ್ಳರೊಂದಿಗೆ ಅಧಿಕಾರಿಗಳು ಶಾಮೀಲಿನ ಬಗ್ಗೆ ಅನುಮಾನ ವ್ಯಕ್ತವಾಗುತ್ತದೆ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಅಶೋಕ್. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಭೂಗಳ್ಳರಿಂದ ಸರ್ಕಾರಿ ಭೂಮಿ ಒತ್ತುವರಿಯಾಗಿರುವುದು ನಿಜ ಎಂದರು. ಇದೇ ವಿಚಾರವಾಗಿ ಈಗಾಗಲೇ ಜಿಲ್ಲಾಧಿಕಾರಿಗಳೆಗೆ ಸೂಚನೆ ನೀಡಿದ್ದೇನೆ. ಪ್ರತಿ ಶನಿವಾರ ಬೇರೆ ಯಾವುದೇ ಕೆಲಸವನ್ನು ಇಟ್ಟು ಕೊಳ್ಳದೇ ಬೆಂಗಳೂರಿನಲ್ಲಿ ಒತ್ತುವರಿಯಾದ ಭೂಮಿಯನ್ನ ಸರ್ವೆ ಮಾಡಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕೇವಲ ಬೆಂಗಳುರು ಮತ್ತು ಗ್ರಾಮಾಂತರಲ್ಲಿ ಮಾತ್ರ ಸರ್ಕಾರಿ ಭೂಮಿ ಒತ್ತುವರಿಯಾಗಿಲ್ಲ ಇಡೀ ರಾಜ್ಯಾದ್ಯಂತ ಒತ್ತುವರಿಯಾಗಿದೆ ಎಂದ ಅವರು ಸಂಬಧಪಟ್ಟ ಶಾಸಕರಿಗೆ ಆಯಾ ಕ್ಷೇತ್ರಗಳಲ್ಲಿ ಒತ್ತುವರಿಯಾದ ಭೂಮಿಯ ವರದಿಯನ್ನ ಸಿದ್ದಪಡಿಸಿ ತಿಳಿಸಲು ಈ ಮೇಲ್ ಮೂಲಕ ಸೂಚಿಸಿದ್ದೇನೆ. ಆದರೆ ಕೆಲವೇ ಮಂದಿ ಮಾತ್ರ ಇದಕ್ಕೆ ಸರಿ ಎಂದು ಉತ್ತರಿಸಿದ್ದಾರೆ ಎಂದು ವಿವರಿಸಿದರು.
ಪಶುವೈದ್ಯರಿಗೂ ಕಾನೂನಿನ ಅಡಿಯಲ್ಲಿ ರಕ್ಷಣೆ ನೀಡಿ: ರಾಜ್ಯ ಪಶುವೈದ್ಯಕೀಯ ಸಂಘ ಒತ್ತಾಯ
ನಗರದಲ್ಲಿ ಎಲ್ಲೆಡೆ ಕಳಪೆ ಕಾಮಗಾರಿ: ಎಚ್.ಡಿ.ಕುಮಾರಸ್ವಾಮಿ
ಪರಿಷತ್ ಟಿಕೆಟ್ ಹಂಚಿಕೆ: ಕಾಂಗ್ರೆಸ್ನಿಂದ ಒಮ್ಮತದ ಅಭ್ಯರ್ಥಿಗಳು ಶಿಫಾರಸು-ಡಿಕೆಶಿ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ: ಈಶ್ವರಪ್ಪ ಪ್ರತಿಕ್ರಿಯೆ
ಮಳೆ ಅನಾಹುತ: ಸಚಿವರ ನೇತೃತ್ವದಲ್ಲಿ 8 ಕಾರ್ಯಪಡೆ ರಚನೆ
ಎಫ್ಡಿಐ ಹೂಡಿಕೆಯಲ್ಲಿ ರಾಜ್ಯಕ್ಕೆ ಸಿಂಹಪಾಲು: ಸಿಎಂ